ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ
ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು ಆಗಾಗ್ಗೆ ಬಡ್ಡಿದರಗಳನ್ನು (Interest Rates) ಪರಿಷ್ಕರಿಸುತ್ತಿರುತ್ತವೆ. ಬಹಳಷ್ಟು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರ ಇಳಿಕೆಗೆ ಪೈಪೋಟಿ ನಡೆಸುತ್ತವೆ. ಹಾಗೆಯೇ, ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರ ಏರಿಕೆಗೂ ಪೈಪೋಟಿ ನಡೆಸುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಎಫ್ಡಿ ದರಗಳನ್ನು ಹೆಚ್ಚಿಸಿವೆ. ಈ ತಿಂಗಳು ಕೆಲ ಪ್ರಮುಖ ಬ್ಯಾಂಕುಗಳು ಎಫ್ಡಿ ಬಡ್ಡಿದರ ಇಳಿಸಿದ್ದು ಅದರ ವಿವರ ಇಲ್ಲಿದೆ.
ಎಕ್ಸಿಸ್ ಬ್ಯಾಂಕ್ ತನ್ನ 10 ವರ್ಷದವರೆಗಿನ ನಿಶ್ಚಿತ ಠೇವಣಿಗೆ ಶೇ. 8.05ರವರೆಗೂ ಬಡ್ಡಿ ವಿಧಿಸುತ್ತದೆ. ಹಿರಿಯ ನಾಗರಿಕರಿಗೆ ಬಡ್ಡಿದರ ಗರಿಷ್ಠ ಸಿಗುತ್ತದೆ. 2 ಕೋಟಿ ರೂ ಒಳಗಿನ 16-17 ತಿಂಗಳ ಅವಧಿಗೆ ಇರಿಸುವ ಎಫ್ಡಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಇನ್ನು, ಇತರ ಸಾಮಾನ್ಯ ಗ್ರಾಹಕರಿಗೆ ಶೇ. 7.3ರವರೆಗೂ ಬಡ್ಡಿದರ ಸಿಗುತ್ತದೆ. ಆಗಸ್ಟ್ 14ರಂದು ಆ್ಯಕ್ಸಿಸ್ ಬ್ಯಾಂಕ್ ಈ ದರ ಪರಿಷ್ಕರಣೆ ಮಾಡಿದೆ.
ಕೆನರಾ ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ಶೇ. 4ರಿಂದ ಶೇ. 7.25ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆಗಸ್ಟ್ 12ರಂದು ಕೆನರಾ ಬ್ಯಾಂಕ್ನ ನೂತನ ಬಡ್ಡಿದರ ಚಾಲನೆಗೆ ಬಂದಿತ್ತು.
ಇದನ್ನೂ ಓದಿ: ಸಾಲವೆಂಬ ಶೂಲಕ್ಕೆ ಏರಿಬಿಟ್ಟೀರಿ ಜೋಕೆ..! ಇಲ್ಲಿದೆ ಸಾಲಮುಕ್ತರನ್ನಾಗಿಸುವ ಟಿಪ್ಸ್
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಫೆಡರಲ್ ಬ್ಯಾಂಕ್ ತನ್ನಲ್ಲಿನ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಬಡ್ಡಿದರ ಹೆಚ್ಚಿಸಿದೆ. ಸಾಮಾನ್ಯ ಗ್ರಾಹಕರ 13 ತಿಂಗಳ ನಿಶ್ಚಿತ ಠೇವಣಿಗೆ ಬ್ಯಾಂಕು ಶೇ. 7.30ಯಷ್ಟು ಗರಿಷ್ಠ ಬಡ್ಡಿ ಕೊಡುತ್ತದೆ. ಇದೇ ಠೇವಣಿಗೆ ಹಿರಿಯ ನಾಗರಿಕರಿಗಾದರೆ ಶೇ. 8.07ರಷ್ಟು ಬಡ್ಡಿ ಸಿಗುತ್ತದೆ.
ದೇಶದ ಪ್ರಮುಖ ಸಣ್ಣ ಬ್ಯಾಂಕುಗಳಲ್ಲಿ ಒಂದಾದ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಫ್ಡಿ ದರಗಳನ್ನು 85 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಆಗಸ್ಟ್ 7ರಿಂದಲೇ ಹೊಸ ದರ ಜಾರಿಗೆ ಬಂದಿದೆ. ಅದರ ಸಾಮಾನ್ಯ ಗ್ರಾಹಕರ ಎಫ್ಡಿಗೆ ಶೇ. 8.60ರವರೆಗೂ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರ ಎಫ್ಡಿಗಳಿಗೆ ಶೇ. 9.10ರವರೆಗೂ ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ