Unity Small Finance Bank: ಹಣ ಮಾಡಬೇಕೆಂದರೆ ನಾವು ಉಳಿಸಿದ ಹಣವನ್ನು ಬೆಳೆಸುವ ಸಮರ್ಪಕ ಮಾರ್ಗವೂ ತಿಳಿದಿರಬೇಕು. ಷೇರು, ಚಿನ್ನ, ರಿಯಲ್ ಎಸ್ಟೇಟ್ ಎಂಬ ಓಡುವ ಕುದುರೆಗಳನ್ನು ಇದಕ್ಕಾಗಿ ಹಲವರು ಬೆನ್ನತ್ತುತ್ತಾರೆ. ಆದರೆ, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಎಫ್ಡಿ ಇಟ್ಟರೆ ನೆಮ್ಮದಿಯಾಗಿ ಹಣ ಬೆಳೆಸಿಕೊಂಡು ಹೋಗಬಹುದು. ಯೂನಿಟಿ ಸ್ಮಾಲ್ ಫೈನಾನ್ ಬ್ಯಾಂಕ್ನಲ್ಲಿರುವ ಎಫ್ಡಿ ದರಗಳು (Unity Small Finance Bank FD Rates) ಭಾರತದಲ್ಲೇ ಗರಿಷ್ಠತಮ ದರಗಳ ಸಾಲಿನಲ್ಲಿ ನಿಲ್ಲುತ್ತವೆ. ಠೇವಣಿಗಳಿಗೆ ಅತಿ ಹೆಚ್ಚು ಬಡ್ಡಿ ನೀಡುತ್ತದೆ ಈ ಬ್ಯಾಂಕು. ವಾರ್ಷಿಕ ಶೇ. 9.50ರವರೆಗೆ ಬಡ್ಡಿ ಪಡೆದು ನೆಮ್ಮದಿಯಾಗಿರಬಹುದು.
ಸರ್ಕಾರದ ಯಾವುದೆ ಸ್ಕೀಮುಗಳಾಗಲೀ, ಇನ್ಷೂರೆನ್ಸ್ ಯೋಜನೆಯಾಗಲಿ ವಾರ್ಷಿಕ ಶೇ. 8.50ಗಿಂತ ಹೆಚ್ಚು ರಿಟರ್ನ್ಸ್ ಕೊಡೋದಿಲ್ಲ. ಬೇರೆ ದೊಡ್ಡ ದೊಡ್ಡ ಬ್ಯಾಂಕುಗಳೂ ಕೂಡ ತಮ್ಮಲ್ಲಿನ ಠೇವಣಿಗಳಿಗೆ ಗರಿಷ್ಠ ಶೇ. 9ರವರೆಗೆ ಮಾತ್ರ ಬಡ್ಡಿ ಕೊಡುತ್ತವೆ. ಈ ಹಿನ್ನೆಲೆಯಲ್ಲಿ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕು ಗಮನ ಸೆಳೆಯುತ್ತದೆ.
ಇದನ್ನೂ ಓದಿ: PPF Account: ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವುದು ಹೇಗೆ?
ಇಲ್ಲಿ ವಯೋವೃದ್ಧರಿಗೆ, ಅಂದರೆ 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರ ನಿರ್ದಿಷ್ಟ ಫಿಕ್ಸೆಡ್ ಡೆಪಾಸಿಟ್ಗೆ ಶೇ. 9.50 ಬಡ್ಡಿಯನ್ನು ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನೀಡುತ್ತದೆ. ಇತರ ಸಾಮಾನ್ಯ ಠೇವಣಿದಾರರಿಗೆ ಶೇ. 9ರವರೆಗೆ ಬಡ್ಡಿ ಸಿಗುತ್ತದೆ.
ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಎಫ್ಡಿ ದರಗಳು ಶೇ. 4.50ರಿಂದ ಆರಂಭವಾಗಿ ಶೇ. 9.50ರವರೆಗೂ ಇವೆ. ಶಗುನ್ ಡೆಪಾಸಿಟ್ ಸ್ಕೀಮ್ನಲ್ಲಿ ಈ ಬ್ಯಾಂಕು ಗರಿಷ್ಠ ಬಡ್ಡಿಯ ಆಫರ್ ಮಾಡಿದೆ.
ಇದನ್ನೂ ಓದಿ: PMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ
181ರಿಂದ 201 ದಿನಗಳ ಅವಧಿ; 501 ದಿನಗಳಿಗೆ ಠೇವಣಿ ಮತ್ತು 1001 ದಿನಗಳ ಠೇವಣಿಗಳಿಗೆ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಕರ್ಷಕ ಬಡ್ಡಿ ಕೊಡುತ್ತದೆ. 181-201 ದಿನಗಳು ಹಾಗೂ 501 ದಿನಗಳಿಗೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಶೇ. 9.25ರಷ್ಟು ಬಡ್ಡಿ ಸಿಗುತ್ತದೆ. ಇತರರಿಗೆ ಶೇ. 8.75ರಷ್ಟು ಬಡ್ಡಿ ಬರುತ್ತದೆ. ಇನ್ನು, 1001ದಿನಗಳ ಅವಧಿ ಠೇವಣಿಗೆ ಹಿರಿಯ ನಾಗರಿಕರಿಗೆ ಶೇ. 9.50ರಷ್ಟು ಬಡ್ಡಿ ಸಿಗುತ್ತದೆ. ಇತರ ಠೇವಣಿದಾರರಿಗೆ ಶೇ. 9ರಷ್ಟು ಬಡ್ಡಿ ಬರುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಎಫ್ಡಿಗಳಿಗೆ ಕನಿಷ್ಠ ಮೊತ್ತ 1,000 ರು ಇದೆ. ಠೇವಣಿ ಅವಧಿ 7 ದಿನದಿಂದ ಆರಂಭವಾಗುತ್ತದೆ. ಎಫ್ಡಿಯ ಗರಿಷ್ಠ ಅವಧಿ 10 ವರ್ಷ ಇದೆ. ಒಂದು ವೇಳೆ ನಿಶ್ಚಿತ ಠೇವಣಿಯನ್ನು ಮುಂಚಿತವಾಗಿ ಹಿಂಪಡೆದುಕೊಂಡರೆ ಶೇ. 1ರ ಮೊತ್ತದಷ್ಟು ದಂಡ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಉದ್ಯೋಗಿಗಳಿಗಂತೂ ಇನ್ನೂ ಶೇ. 1ರಷ್ಟು ಹೆಚ್ಚು ಬಡ್ಡಿ ದರಗಳು ಸಿಗುತ್ತವೆ. ಅಂದರೆ 60 ವರ್ಷದೊಳಗಿನ ವಯಸ್ಸಿನ ಈ ಬ್ಯಾಂಕ್ ಸಿಬ್ಬಂದಿ ಇರಿಸುವ ನಿಶ್ಚಿತ ಠೇವಣಿಗಳಿಗೆ ಶೇ. 10ರವರೆಗೆ ಬಡ್ಡಿ ಸಿಗುತ್ತದೆ.
ಇನ್ನು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಸೇವಿಂಗ್ ಡೆಪಾಸಿಟ್ಗಳಿಗೂ ಒಳ್ಳೆಯ ಬಡ್ಡಿ ಸಿಗುತ್ತದೆ. ಇದರ ಉಳಿತಾಯ ಖಾತೆಗಳಲ್ಲಿರುವ ಹಣಕ್ಕೆ ಶೇ. 7ರವರೆಗೂ ಬಡ್ಡಿ ಸಿಗುತ್ತದೆ. 1 ಲಕ್ಷ ರೂ ಒಳಗಿನ ಹಣಕ್ಕೆ ಶೇ. 6ರಷ್ಟು ಬಡ್ಡಿ ಜಮೆಯಾಗುತ್ತದೆ. ಅದಕ್ಕಿಂತ ಮೇಲ್ಪಟ್ಟ ಹಣಕ್ಕೆ ಶೇ. 7ರಷ್ಟು ಹಣ ಸಿಗುತ್ತದೆ.
Published On - 2:20 pm, Sun, 19 March 23