ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ
ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂದು ಹಿರಿಯರು ಸುಮ್ಮನೆ ಹೇಳಿದ್ದಲ್ಲ. ಇವತ್ತಿನ ದಿನಮಾನದಲ್ಲಿ ಈ ಗಾದೆ ಮಾತು ಅಕ್ಷರಶಃ ನಿಜ. ನಮ್ಮ ಕನಸಿನ ಮನೆ ಪಡೆಯುವುದು ಅದೆಷ್ಟು ಕಷ್ಟ ಎಂಬುದು ಬಲ್ಲವರೇ ಬಲ್ಲರು. ಮನೆ ನಮಗೆ ಆಸರೆ ಮಾತ್ರವಲ್ಲ, ನಮ್ಮ ಭದ್ರತೆಗೆ ಒಂದು ನೆಲೆ. ಮನೆ ಮಾಡುವುದು ಯಾರದೇ ಜೀವನದಲ್ಲಾದರೂ ಒಂದು ಮಹತ್ವದ ಮೈಲಿಗಲ್ಲು. ಹೂಡಿಕೆಗಾಗಿ ನಿವೇಶನ ಕೊಳ್ಳುವುದು ಬೇರೆ, ವಾಸಕ್ಕೆ ಮನೆ ಮಾಡುವುದು ಬೇರೆ. ಮನೆ ಖರೀದಿಸುವುದು ಕೇವಲ ಹಣಕಾಸು ವೆಚ್ಚದ ವಿಚಾರ ಮಾತ್ರವಲ್ಲ, ಅದು ಭಾವನಾತ್ಮಕ ಸಂಗತಿಯೂ ಹೌದು. ಸ್ವಂತ ಮನೆಯ (Dream House) ಕನಸು ಹೊಂದಿರುವ ಬಹಳಷ್ಟು ಜನರು ಅಪಾರ್ಟ್ಮೆಂಟ್ಗಳಲ್ಲಿ ಮನೆ ಖರೀದಿಸುವುದುಂಟು. ಇನ್ನೂ ಕೆಲವರು ಸ್ವತಂತ್ರವಾಗಿರುವ ಮನೆಯನ್ನು ಖರೀದಿಸಲು ಇಷ್ಟಪಡುತ್ತಾರೆ. ಯಾವುದೇ ಆದರೂ ಮನೆ ಖರೀದಿಸುವ ಮುನ್ನ ನಾವು ಕೆಲವಿಷ್ಟು ಅಂಶಗಳನ್ನು ಪರಿಗಣಿಸಲೇಬೇಕಾಗುತ್ತದೆ.
ನೀವು ವಾಸಕ್ಕಾಗಿ ಮನೆ ಅಥವಾ ನಿವೇಶನ ಖರೀದಿಸುತ್ತಿದ್ದರೆ ಅದರ ಸ್ಥಳದ ಬಗ್ಗೆ ಗಮನ ಕೊಡಬೇಕು. ಆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳು ಹೇಗಿವೆ? ನಿಮ್ಮ ಕೆಲಸದ ಸ್ಥಳದಿಂದ ಎಷ್ಟು ದೂರ ಇದೆ? ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಜರಿಕೆಯಿಲ್ಲದೇ ಓಡಾಡುವಷ್ಟು ಭದ್ರತಾ ವಾತಾವರಣ ಇದೆಯಾ? ಆ ಪ್ರದೇಶ ಎಷ್ಟು ಅಭಿವೃದ್ಧಿಯಾಗಿದೆ? ಮುಂದಿನ ದಿನಗಳಲ್ಲಿ ಎಷ್ಟು ವೇಗದಲ್ಲಿ ಅಭಿವೃದ್ಧಿ ಆಗಬಹುದು? ಇವೆಲ್ಲವನ್ನೂ ನೀವು ಗಮನಿಸಬೇಕು.
ಇದನ್ನೂ ಓದಿ: RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್ಬಿಐ ಅಪ್ಪಣೆ
ಬೆಂಗಳೂರಿನಲ್ಲಿ ಡಬಲ್ ಬೆಡ್ರೂಮ್ನ ಮನೆಯೊಂದನ್ನು ಖರೀದಿಸಬೇಕೆಂದರೆ ಏನಿಲ್ಲವೆಂದರೂ 25 ಲಕ್ಷ ರೂನಿಂದ ಆರಂಭವಾಗುತ್ತದೆ. ನೀವು ಹೋಮ್ ಲೋನ್ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಮನೆ ಖರೀದಿ ವೆಚ್ಚದಲ್ಲಿ ಶೇ. 80ರಷ್ಟರವರೆಗೂ ಬ್ಯಾಂಕುಗಳು ಸಾಲ ಕೊಡುತ್ತವೆ. ಕೆಲ ಸಂದರ್ಭಗಳಲ್ಲಿ ಬ್ಯಾಂಕುಗಳು ಕಡಿಮೆ ಮೊತ್ತದ ಸಾಲ ಮಾತ್ರ ನೀಡಬಹುದು. ಹೀಗಾಗಿ ನೀವು ವಿವಿಧ ಬ್ಯಾಂಕುಗಳಿಗೆ ಹೋಗಿ ವಿಚಾರಿಸಬಹುದು. ನಿಮಗೆ ಗರಿಷ್ಠ ಎಷ್ಟು ಸಾಲ ಸಿಗಬಹುದು ಎಂಬುದರ ಮೇಲೆ ನಿಮ್ಮ ಬಜೆಟ್ನಲ್ಲಿ ಮನೆ ಹುಡುಕಾಟ ನಡೆಸಬಹುದು.
ಇದನ್ನೂ ಓದಿ: ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ
ಮನೆ ಮೇಲೆ ನೀವು ಸಾಲ ಪಡೆದು ಅದನ್ನು ವಿನಿಯೋಗಿಸುತ್ತೀರಿ. ಆದರೆ, ಇದಲ್ಲದೇ ಇನ್ನೂ ಕೆಲ ಹೆಚ್ಚುವರಿ ವೆಚ್ಚಗಳು ಮನೆ ಖರೀದಿಯಲ್ಲಿ ಇರುತ್ತವೆ. ಪ್ರಾಪರ್ಟಿ ರಿಜಿಸ್ಟ್ರೇಶನ್, ಮೈಂಟೆನೆನ್ಸ್ ಇತ್ಯಾದಿ ವೆಚ್ಚಗಳಿಗೆ ನಿಮ್ಮ ಬಳಿ ಹಣ ಸಾಲದಾಗಿ ಹೋಗಬಹುದು. ಆದ್ದರಿಂದ ಮೊದಲೇ ಎಲ್ಲವನ್ನೂ ಲೆಕ್ಕ ಹಾಕಿ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Fri, 18 August 23