ಮನೆ ಖರೀದಿಸುವ ಯೋಜನೆಯಾ? ನೀವು ಪರಿಗಣಿಸಬೇಕಾದ ಪ್ರಮುಖ ಸಂಗತಿಗಳಿವು

Tips When Buying Home First Time: ನಾವು ಜೀವನದಲ್ಲಿ ಮನೆ ಕಟ್ಟುವುದು ಒಮ್ಮೆಯೋ ಅಥವಾ ಹೆಚ್ಚೆಂದರೆ ಎರಡು ಮೂರು ಬಾರಿ ಮಾತ್ರವೇ. ವಾಸಕ್ಕೆ ಮನೆ ಕಟ್ಟುವಾಗ ಅದರ ಸ್ಥಳ ಇತ್ಯಾದಿ ಬಗ್ಗೆ ಬಹಳ ಎಚ್ಚರ ವಹಿಸಬೇಕು. ಈ ಬಗ್ಗೆ ಒಂದಷ್ಟು ಸಲಹೆಗಳು ಇಲ್ಲಿವೆ...

Important Highlight‌
ಮನೆ ಖರೀದಿಸುವ ಯೋಜನೆಯಾ? ನೀವು ಪರಿಗಣಿಸಬೇಕಾದ ಪ್ರಮುಖ ಸಂಗತಿಗಳಿವು
ಮನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 18, 2023 | 5:29 PM

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂದು ಹಿರಿಯರು ಸುಮ್ಮನೆ ಹೇಳಿದ್ದಲ್ಲ. ಇವತ್ತಿನ ದಿನಮಾನದಲ್ಲಿ ಈ ಗಾದೆ ಮಾತು ಅಕ್ಷರಶಃ ನಿಜ. ನಮ್ಮ ಕನಸಿನ ಮನೆ ಪಡೆಯುವುದು ಅದೆಷ್ಟು ಕಷ್ಟ ಎಂಬುದು ಬಲ್ಲವರೇ ಬಲ್ಲರು. ಮನೆ ನಮಗೆ ಆಸರೆ ಮಾತ್ರವಲ್ಲ, ನಮ್ಮ ಭದ್ರತೆಗೆ ಒಂದು ನೆಲೆ. ಮನೆ ಮಾಡುವುದು ಯಾರದೇ ಜೀವನದಲ್ಲಾದರೂ ಒಂದು ಮಹತ್ವದ ಮೈಲಿಗಲ್ಲು. ಹೂಡಿಕೆಗಾಗಿ ನಿವೇಶನ ಕೊಳ್ಳುವುದು ಬೇರೆ, ವಾಸಕ್ಕೆ ಮನೆ ಮಾಡುವುದು ಬೇರೆ. ಮನೆ ಖರೀದಿಸುವುದು ಕೇವಲ ಹಣಕಾಸು ವೆಚ್ಚದ ವಿಚಾರ ಮಾತ್ರವಲ್ಲ, ಅದು ಭಾವನಾತ್ಮಕ ಸಂಗತಿಯೂ ಹೌದು. ಸ್ವಂತ ಮನೆಯ (Dream House) ಕನಸು ಹೊಂದಿರುವ ಬಹಳಷ್ಟು ಜನರು ಅಪಾರ್ಟ್ಮೆಂಟ್​ಗಳಲ್ಲಿ ಮನೆ ಖರೀದಿಸುವುದುಂಟು. ಇನ್ನೂ ಕೆಲವರು ಸ್ವತಂತ್ರವಾಗಿರುವ ಮನೆಯನ್ನು ಖರೀದಿಸಲು ಇಷ್ಟಪಡುತ್ತಾರೆ. ಯಾವುದೇ ಆದರೂ ಮನೆ ಖರೀದಿಸುವ ಮುನ್ನ ನಾವು ಕೆಲವಿಷ್ಟು ಅಂಶಗಳನ್ನು ಪರಿಗಣಿಸಲೇಬೇಕಾಗುತ್ತದೆ.

ಪ್ರಾಪರ್ಟಿಯ ಸ್ಥಳ ಎಲ್ಲಿದೆ ಎಂಬುದು ಮುಖ್ಯ?

ನೀವು ವಾಸಕ್ಕಾಗಿ ಮನೆ ಅಥವಾ ನಿವೇಶನ ಖರೀದಿಸುತ್ತಿದ್ದರೆ ಅದರ ಸ್ಥಳದ ಬಗ್ಗೆ ಗಮನ ಕೊಡಬೇಕು. ಆ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳು ಹೇಗಿವೆ? ನಿಮ್ಮ ಕೆಲಸದ ಸ್ಥಳದಿಂದ ಎಷ್ಟು ದೂರ ಇದೆ? ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂಜರಿಕೆಯಿಲ್ಲದೇ ಓಡಾಡುವಷ್ಟು ಭದ್ರತಾ ವಾತಾವರಣ ಇದೆಯಾ? ಆ ಪ್ರದೇಶ ಎಷ್ಟು ಅಭಿವೃದ್ಧಿಯಾಗಿದೆ? ಮುಂದಿನ ದಿನಗಳಲ್ಲಿ ಎಷ್ಟು ವೇಗದಲ್ಲಿ ಅಭಿವೃದ್ಧಿ ಆಗಬಹುದು? ಇವೆಲ್ಲವನ್ನೂ ನೀವು ಗಮನಿಸಬೇಕು.

ಇದನ್ನೂ ಓದಿ: RBI: ಸಾಲ ಕಟ್ಟಲು ವಿಳಂಬಿಸುವ ಗ್ರಾಹಕರಿಗೆ ದುಬಾರಿ ದಂಡ ವಿಧಿಸುವಂತಿಲ್ಲ: ಬ್ಯಾಂಕುಗಳಿಗೆ ಆರ್​ಬಿಐ ಅಪ್ಪಣೆ

ಗೃಹಸಾಲಕ್ಕೆ ಪ್ರೀ ಅಪ್ರೂವಲ್ ಅವಲೋಕಿಸಿ

ಬೆಂಗಳೂರಿನಲ್ಲಿ ಡಬಲ್ ಬೆಡ್​ರೂಮ್​ನ ಮನೆಯೊಂದನ್ನು ಖರೀದಿಸಬೇಕೆಂದರೆ ಏನಿಲ್ಲವೆಂದರೂ 25 ಲಕ್ಷ ರೂನಿಂದ ಆರಂಭವಾಗುತ್ತದೆ. ನೀವು ಹೋಮ್ ಲೋನ್ ಪಡೆಯುವುದು ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಮನೆ ಖರೀದಿ ವೆಚ್ಚದಲ್ಲಿ ಶೇ. 80ರಷ್ಟರವರೆಗೂ ಬ್ಯಾಂಕುಗಳು ಸಾಲ ಕೊಡುತ್ತವೆ. ಕೆಲ ಸಂದರ್ಭಗಳಲ್ಲಿ ಬ್ಯಾಂಕುಗಳು ಕಡಿಮೆ ಮೊತ್ತದ ಸಾಲ ಮಾತ್ರ ನೀಡಬಹುದು. ಹೀಗಾಗಿ ನೀವು ವಿವಿಧ ಬ್ಯಾಂಕುಗಳಿಗೆ ಹೋಗಿ ವಿಚಾರಿಸಬಹುದು. ನಿಮಗೆ ಗರಿಷ್ಠ ಎಷ್ಟು ಸಾಲ ಸಿಗಬಹುದು ಎಂಬುದರ ಮೇಲೆ ನಿಮ್ಮ ಬಜೆಟ್​ನಲ್ಲಿ ಮನೆ ಹುಡುಕಾಟ ನಡೆಸಬಹುದು.

ಇದನ್ನೂ ಓದಿ: ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ

ಮನೆ ಖರೀದಿಯಲ್ಲಿ ಬೇರೆ ವೆಚ್ಚಗಳಿಗೂ ಸಿದ್ಧವಾಗಿ

ಮನೆ ಮೇಲೆ ನೀವು ಸಾಲ ಪಡೆದು ಅದನ್ನು ವಿನಿಯೋಗಿಸುತ್ತೀರಿ. ಆದರೆ, ಇದಲ್ಲದೇ ಇನ್ನೂ ಕೆಲ ಹೆಚ್ಚುವರಿ ವೆಚ್ಚಗಳು ಮನೆ ಖರೀದಿಯಲ್ಲಿ ಇರುತ್ತವೆ. ಪ್ರಾಪರ್ಟಿ ರಿಜಿಸ್ಟ್ರೇಶನ್, ಮೈಂಟೆನೆನ್ಸ್ ಇತ್ಯಾದಿ ವೆಚ್ಚಗಳಿಗೆ ನಿಮ್ಮ ಬಳಿ ಹಣ ಸಾಲದಾಗಿ ಹೋಗಬಹುದು. ಆದ್ದರಿಂದ ಮೊದಲೇ ಎಲ್ಲವನ್ನೂ ಲೆಕ್ಕ ಹಾಕಿ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Fri, 18 August 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು