ಬೆಂಗಳೂರು, ಆಗಸ್ಟ್ 23: ಹಬ್ಬದ ಸೀಸನ್ ಸಮೀಪಿಸುತ್ತಿದೆ. ಸೆಪ್ಟೆಂಬರ್ನಿಂದ ನವೆಂಬರ್ವರೆಗೂ ನಾನಾ ಹಬ್ಬಗಳಿವೆ. ಒಂದಲ್ಲ ಒಂದು ಹಬ್ಬಕ್ಕೆ ಊರಿಗೆ ಹೋಗುವ ಸಂದರ್ಭ ಇದ್ದೇ ಇರುತ್ತದೆ. ದೂರದ ಊರುಗಳಲ್ಲಿ ಕೆಲಸದಲ್ಲಿ ಇರುವ ಜನರು ಹಬ್ಬಕ್ಕೆ ತಮ್ಮ ಊರಿಗೆ ಹೋಗುವುದಿದೆ. ಅಂತೆಯೇ ಈ ಮೂರು ತಿಂಗಳು ರೈಲು, ಬಸ್ಸು, ವಿಮಾನಗಳಿಗೆ ಬಹಳ ಬೇಡಿಕೆ ಇರುತ್ತದೆ. ಇಂಥ ಸಂದರ್ಭಗಳನ್ನು ದಳ್ಳಾಳಿಗಳು (Touts) ಬಹಳ ದುರುಪಯೋಗಿಸಿಕೊಳ್ಳುತ್ತಾರೆ. ರೈಲ್ವೆ ನಿಲ್ದಾಣದ ಬಳಿಯೋ, ಬಸ್ ನಿಲ್ದಾಣದ ಬಳಿಯೂ ಸುಳಿದಾಡುವ ಈ ಮಧ್ಯವರ್ತಿಗಳು ಗ್ರಾಹಕರಿಗೆ ಸುಲಭವಾಗಿ ಟಿಕೆಟ್ (ticket booking) ಕೊಡಿಸುತ್ತೇವೆಂದು ಪುಸಲಾಯಿಸಿ ಹೆಚ್ಚು ಹಣ ವಸೂಲಿ ಮಾಡುವ ಘಟನೆಗಳು ತೀರಾ ಸಾಮಾನ್ಯ.
ನೀವು ಹಬ್ಬದ ಸಂದರ್ಭದಲ್ಲಿ ಟಿಕೆಟ್ ಬುಕ್ ಮಾಡದೇ, ನಿಲ್ದಾಣಗಳಲ್ಲಿ ನೇರವಾಗಿ ಟಿಕೆಟ್ ಬುಕ್ ಮಾಡುವ ಇರಾದೆಯಲ್ಲಿ ಹೋದರೆ ಇಂಥ ದಳ್ಳಾಳಿಗಳ ಕೈಗೆ ಸಿಲುಕಬೇಕಾದೀತು. ಎಲ್ಲಿಯೂ ಟಿಕೆಟ್ ಸಿಕ್ಕೋದಿಲ್ಲ, ತಮ್ಮ ಬಳಿ ಮಾತ್ರ ಟಿಕೆಟ್ ಇರೋದು ಎಂದು ನಂಬಿಸಿ ನಿಮ್ಮನ್ನು ಇವರು ಯಾಮಾರಿಸಬಹುದು. ಹೆಚ್ಚಿನ ಬೆಲೆ ಪಡೆದು ಟಿಕೆಟ್ ಕೊಟ್ಟರೆ ನಿಮ್ಮ ಅದೃಷ್ಟ. ಕೆಲ ದಳ್ಳಾಳಿಗಳು ಟಿಕೆಟ್ ತರುವುದಾಗಿ ಹೇಳಿ ನಿಮ್ಮಿಂದ ದುಡ್ಡು ಪಡೆದು ಮಾಯವಾಗಬಹುದು.
ಇದನ್ನೂ ಓದಿ: Cybercrimes: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕ್ಯೂಆರ್ ಕೋಡ್ ಸ್ಕ್ಯಾಮ್; ಹೇಗೆಲ್ಲಾ ಯಾಮಾರಿಸ್ತಾರೆ ನೋಡಿ..!
ಇ-ಟಿಕೆಟ್ ಕೊಡಿಸುವ ಜಾಲವನ್ನು ಭೇದಿಸಲು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಆಪರೇಷನ್ ಉಪಲಬ್ಧ್ ಕಾರ್ಯಾರಣೆ ನಡೆಸುತ್ತದೆ. ಇತ್ತೀಚೆಗೆ ಈ ಕಾರ್ಯಾಚರಣೆಯಲ್ಲಿ 1,000ಕ್ಕೂ ಹೆಚ್ಚು ಅಕ್ರಮ ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: eRupee App: ಒಂದೇ ಆ್ಯಪ್ನಲ್ಲಿ ಇ-ರುಪೀ ಮತ್ತು ಯುಪಿಐ; ಕೆನರಾ ಬ್ಯಾಂಕ್ನಿಂದ ಡಿಜಿಟಲ್ ರುಪೀ ಅಪ್ಲಿಕೇಶನ್
ರೈಲು ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರ ಐಡಿ ಕಾರ್ಡ್ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ದಳ್ಳಾಳಿಗಳು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡುವುದು ಕಷ್ಟವಾಗುತ್ತದೆ.
ಐಆರ್ಸಿಟಿಸಿ ವೆಬ್ಸೈಟ್ ಮತ್ತು ಆ್ಯಪ್ ಎರಡೂ ಕಡೆ ರೈಲು ಟಿಕೆಟ್ ಬುಕ್ ಮಾಡಬಹುದು. ಇಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಬಹಳ ಸರಳ ಇರುವಂತೆ ನೋಡಿಕೊಳ್ಳಲಾಗಿದೆ. ಪ್ರಯಾಣಿಕರು ಸುಲಭವಾಗಿ ಇಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ