Gold Price Today: ಒಂದೇ ದಿನದಲ್ಲಿ ದಾಖಲೆಯ 2,100 ಕುಸಿತ ಕಂಡ ಬೆಳ್ಳಿ ದರ; ಚಿನ್ನದ ಬೆಲೆಯೂ ಇಳಿಕೆ

| Updated By: Sushma Chakre

Updated on: May 14, 2022 | 6:00 AM

Silver Price Today: ಭಾರತದಲ್ಲಿ ಇಂದು ಒಂದೇ ದಿನದಲ್ಲಿ ಬೆಳ್ಳಿ ಬೆಲೆ 2,100 ರೂ. ಕುಸಿತ ಕಾಣುವ ಮೂಲಕ ದಾಖಲೆ ನಿರ್ಮಿಸಿದೆ. ಚಿನ್ನದ ದರವೂ ಕೊಂಚ ಇಳಿಕೆಯಾಗಿದೆ.

Gold Price Today: ಒಂದೇ ದಿನದಲ್ಲಿ ದಾಖಲೆಯ 2,100 ಕುಸಿತ ಕಂಡ ಬೆಳ್ಳಿ ದರ; ಚಿನ್ನದ ಬೆಲೆಯೂ ಇಳಿಕೆ
ಚಿನ್ನದ ಬೆಲೆ
Follow us on

ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಭಾರೀ ಕುಸಿತ ಕಂಡಿದೆ. ಇಂದು ಚಿನ್ನದ ದರ (Gold Price) 10 ಗ್ರಾಂಗೆ 820 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆ ಕೂಡ (Silver Price) ಇಂದು ದಾಖಲೆಯ 2,100 ರೂ. ಕುಸಿತ ಕಂಡಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,200 ರೂ. ಇದ್ದುದು 46,450 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,490 ರೂ. ಇದ್ದುದು 50,670 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,640 ರೂ. ಮುಂಬೈ- 46,450 ರೂ, ದೆಹಲಿ- 46,450 ರೂ, ಕೊಲ್ಕತ್ತಾ- 46,450 ರೂ, ಬೆಂಗಳೂರು- 46,450 ರೂ, ಹೈದರಾಬಾದ್- 46,450 ರೂ, ಕೇರಳ- 46,450 ರೂ, ಪುಣೆ- 46,480 ರೂ, ಮಂಗಳೂರು- 46,450 ರೂ, ಮೈಸೂರು- 46,450 ರೂ. ಇದೆ. (Source)

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 51,970 ರೂ, ಮುಂಬೈ- 50,670 ರೂ, ದೆಹಲಿ- 50,670 ರೂ, ಕೊಲ್ಕತ್ತಾ- 50,670 ರೂ, ಬೆಂಗಳೂರು- 50,670 ರೂ, ಹೈದರಾಬಾದ್- 50,670 ರೂ, ಕೇರಳ- 50,670 ರೂ, ಪುಣೆ- 50,700 ರೂ, ಮಂಗಳೂರು- 50,670 ರೂ, ಮೈಸೂರು- 50,670 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಇಂದು ದಾಖಲೆಯ 2,100 ರೂ. ಕುಸಿತ ಕಂಡಿದೆ.

ಇಂದಿನ ಬೆಳ್ಳಿಯ ದರ:
ಇಂದು ಬೆಳ್ಳಿ ಬೆಲೆಯಲ್ಲಿ ದಾಖಲೆಯ ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,800 ರೂ. ಇದ್ದುದು ಇಂದು 58,700 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,400 ರೂ, ಮೈಸೂರು- 63,400 ರೂ., ಮಂಗಳೂರು- 63,400 ರೂ., ಮುಂಬೈ- 58,700 ರೂ, ಚೆನ್ನೈ- 63,400 ರೂ, ದೆಹಲಿ- 58,700 ರೂ, ಹೈದರಾಬಾದ್- 63,400 ರೂ, ಕೊಲ್ಕತ್ತಾ- 63,400 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ