Expert Opinion: ಭಾರತದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಿದ ಸೋಲಾರ್, ಪವನ ವಿದ್ಯುತ್ ಉಪಕ್ರಮ

ಭಾರತವು 2022ರ ಬೇಸಿಗೆಯ ವಿದ್ಯುತ್ ಬೇಡಿಕೆ ನಿಭಾಯಿಸಿದ್ದು ಈಗ ಚೀನಾ ಸೇರಿದಂತೆ ಹಲವು ದೇಶಗಳ ಗಮನ ಸೆಳೆದಿದೆ. ಈ ಮೋಡಿ ಸಾಧ್ಯವಾಗಿದ್ದು ಹೇಗೆ? ಭಾರತೀಯರನ್ನು ಲೋಡ್​ ಶೆಡ್ಡಿಂಗ್​ನಿಂದ ಕಾಪಾಡಿದ ಶಕ್ತಿ ಯಾವುದು ಎಂಬ ಪ್ರಶ್ನೆಗೆ ವಿಶ್ವದ ಹಲವು ವಿಶ್ಲೇಷಕರು ಉತ್ತರ ಹುಡುಕುತ್ತಿದ್ದಾರೆ.

Important Highlight‌
Expert Opinion: ಭಾರತದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಿದ ಸೋಲಾರ್, ಪವನ ವಿದ್ಯುತ್ ಉಪಕ್ರಮ
ವಿದ್ಯುತ್ ಕ್ಷೇತ್ರದ ವಿಶ್ಲೇಷಕ ಜಾನ್ ಕೆಂಪ್ (ಎಡಚಿತ್ರ)
Follow us
TV9 Digital Desk
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 02, 2022 | 3:38 PM

ಪ್ರತಿ ಬಾರಿ ಬೇಸಿಗೆ ಕಳೆದು, ಮಳೆಗಾಲ ಆರಂಭವಾದಾಗ ವಿದ್ಯುತ್ ಉತ್ಪಾದನೆ (Electricity Generation) ಮತ್ತು ವಿದ್ಯುತ್ ವಿತರಣಾ ಕಂಪನಿಗಳು (DISCOMS) ಭಾರತದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುತ್ತವೆ. ರಷ್ಯಾ-ಉಕ್ರೇನ್ ಸಂಘರ್ಷದ ತಾಕಲಾಟದ ನಡುವೆಯೂ ಭಾರತದಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಲಿಲ್ಲ. ಭಾರತವು 2022ರ ಬೇಸಿಗೆಯ ವಿದ್ಯುತ್ ಬೇಡಿಕೆ ನಿಭಾಯಿಸಿದ್ದು ಈಗ ಚೀನಾ ಸೇರಿದಂತೆ ಹಲವು ದೇಶಗಳ ಗಮನ ಸೆಳೆದಿದೆ. ಈ ಮೋಡಿ ಸಾಧ್ಯವಾಗಿದ್ದು ಹೇಗೆ? ಭಾರತೀಯರನ್ನು ಲೋಡ್​ ಶೆಡ್ಡಿಂಗ್​ನಿಂದ ಕಾಪಾಡಿದ ಶಕ್ತಿ ಯಾವುದು ಎಂಬ ಪ್ರಶ್ನೆಗೆ ವಿಶ್ವದ ಹಲವು ವಿಶ್ಲೇಷಕರು ಉತ್ತರ ಹುಡುಕುತ್ತಿದ್ದಾರೆ. ಜಾಗತಿಕ ಸುದ್ದಿ-ವಿಶ್ಲೇಷಣೆಯನ್ನು ನೀಡುವ ಪ್ರಸಿದ್ಧ ಸುದ್ದಿಸಂಸ್ಥೆ ರಾಯಿಟರ್ಸ್​​ನ ಜಾನ್ ಕೆಂಪ್ ಈ ಬರಹದಲ್ಲಿ ತಾವು ಕಂಡುಕೊಂಡ ಸತ್ಯವನ್ನು ಅಂಕಿಅಂಶಗಳ ಸಹಿತ ವಿವರಿಸಿದ್ದಾರೆ.

***

ಕೃಷಿ, ಎಸಿ, ಫ್ಯಾನ್ ಸೇರಿದಂತೆ ಭಾರತದಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ತಾರರಕ್ಕೇರಿರುತ್ತದೆ. ಜಲವಿದ್ಯುತ್​ ಕೇಂದ್ರಗಳನ್ನು ನೀರಿನ ಸಂಗ್ರಹ ಕಡಿಮೆಯಾಗುವುದರಿಂದ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಘಟಕಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. 2021 ಮತ್ತು 2022ರ ಬೇಸಿಗೆಯಲ್ಲಿ ವಿದ್ಯುತ್ ಕೊರತೆಯು ಭಾರತವನ್ನು ಬಹುವಾಗಿ ಕಾಡಲಿಲ್ಲ. ತಕ್ಕಮಟ್ಟಿಗೆ ಕಲ್ಲಿದ್ದಲು ದಾಸ್ತಾನು ಮಾಡಿಟ್ಟುಕೊಂಡಿದ್ದು ಹಾಗೂ ನವೀಕರಣಗೊಳಿಸಬಹುದಾದ (ಸೌರ ವಿದ್ಯುತ್, ಪವನ ವಿದ್ಯುತ್ ಘಟಕಗಳು ಇತ್ಯಾದಿ) ವಿದ್ಯುತ್ ಉತ್ಪಾದನಾ ಮಾರ್ಗಗಳಿಗೆ ಒತ್ತು ಕೊಟ್ಟಿದ್ದು ಇದಕ್ಕೆ ಮುಖ್ಯ ಕಾರಣ.

2021ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿತ್ತು. ಹೀಗಾಗಿ ಲೋಡ್​ಶೆಡ್ಡಿಂಗ್ ಅನಿವಾರ್ಯವಾಗಿತ್ತು. ಕಳೆದ ಅಕ್ಟೋಬರ್ ತಿಂಗಳ 1ನೇ ತಾರೀಖಿನಂದು ದೇಶದ ವಿವಿಧ ಉಷ್ಣವಿದ್ಯುತ್ ಸ್ಥಾವರಗಳಲ್ಲಿ 9 ದಿನಗಳ ಉತ್ಪಾದನೆಗೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿತ್ತು. ಕಳೆದ ವರ್ಷ ಈ ಹೊತ್ತಿನಲ್ಲಿ ಕೇವಲ 4 ದಿನಗಳಿಗೆ ಆಗುವಷ್ಟು ಸಂಗ್ರಹ ಮಾತ್ರವೇ ಉಳಿದಿತ್ತು. ಕಲ್ಲಿದ್ದಲು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದ್ದ ಕಾರಣ ವಿದ್ಯುತ್ ಸ್ಥಾವರಗಳು ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾದ ಅಗತ್ಯ ಬರಲಿಲ್ಲ.

ಉತ್ತರ ಭಾರತದಲ್ಲಿ ಈ ವರ್ಷದ ಬೇಸಿಗೆಯಲ್ಲಿ ಉಷ್ಣಾಂಶವು ಕಳೆದ ವರ್ಷಕ್ಕಿಂತಲೂ ತುಸು ತಂಪಾಗಿತ್ತು. ಇದರಿಂದ ಎಸಿ ಹಾಗೂ ಫ್ರಿಡ್ಜ್​ಗಳು ವಾಡಿಕೆಯಷ್ಟು ವಿದ್ಯುತ್ ಬೇಡಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಬೇಸಿಗೆಯಲ್ಲಿ ದೆಹಲಿಯಲ್ಲಿ ಬೇಸಿಗೆಯ ಸರಾಸರಿ ಉಷ್ಣಾಂಶ 0.9 ಡಿಗ್ರಿಯಷ್ಟು ಕಡಿಮೆಯಿತ್ತು. ದೀರ್ಘಾವಧಿ ಸರಾಸರಿಗೆ ಹೋಲಿಸಿದರೆ 1.2 ಡಿಗ್ರಿ ಸೆಲ್ಷಿಯಸ್​ನಷ್ಟು ಕಡಿಮೆಯಿತ್ತು.

ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗದಂತೆ ದೇಶವನ್ನು ಕಾಪಾಡಿದ್ದು ನವೀಕರಣಗೊಳಿಸಬಹುದಾದ ಮೂಲಗಳಿಂದ ಉತ್ಪಾದಿಸುವ ವಿದ್ಯುತ್. ಪೂರೈಕೆಯಾದ ವಿದ್ಯುತ್ ಪ್ರಮಾಣದಲ್ಲಿ ಸೌರವಿದ್ಯುತ್ 2.1 ಶತಕೋಟಿ ಯೂನಿಟ್, ಜಲವಿದ್ಯುತ್ 0.7 ಶತಕೋಟಿ ಯೂನಿಟ್, ಪವನ ವಿದ್ಯುತ್ 0.3 ಶತಕೋಟಿ ಯೂನಿಟ್​ ಸೇರಿದೆ. ದೇಶದಲ್ಲಿ ಸರಾಸರಿ ವಿದ್ಯುತ್ ಬೇಡಿಕೆಯು ಅಕ್ಟೋಬರ್ ತಿಂಗಳಲ್ಲಿ 115 ಶತಕೋಟಿ ಯೂನಿಟ್ ಇತ್ತು.

ನವೀಕರಣಗೊಳಿಸಬಹುದಾದ ವಿದ್ಯುತ್ ಉತ್ಪಾದನೆ ಹೆಚ್ಚಾದ ಹಿನ್ನೆಲೆಯಲ್ಲಿ ಕಲ್ಲಿದ್ದಲು, ಅನಿಲ ಮತ್ತು ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸುವ ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬೀಳಲಿಲ್ಲ. ಮನೆ, ಕಚೇರಿ ಮತ್ತು ಕಾರ್ಖಾನೆಗಳಲ್ಲಿಯೂ ವಿದ್ಯುತ್ ಉತ್ಪಾದನೆಗೆ ಜನರೇಟರ್​ಗಳನ್ನು ಹೆಚ್ಚಾಗಿ ಬಳಸುವ ಅನಿವಾರ್ಯತೆ ಸೃಷ್ಟಿಯಾಗಲಿಲ್ಲ. ಈ ವರ್ಷ ಅಕ್ಟೋಬರ್​ನಲ್ಲಿ ಭಾರತ ದೇಶವು ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಜಲ ವಿದ್ಯುತ್, ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಘಟಕಗಳಿಂದ ಉತ್ಪಾದನೆಯುತ್ತಿರುವ ವಿದ್ಯುತ್ ಪ್ರಮಾಣವು ಒಟ್ಟು ಬೇಡಿಕೆಯ ಕಾಲು ಭಾಗಕ್ಕಿಂತಲೂ ತುಸು ಹೆಚ್ಚಿನ ಪ್ರಮಾಣವನ್ನು (ಶೇ 25.4) ಪೂರೈಕೆ ಮಾಡಿದೆ.

ಕಳೆದ ವರ್ಷ (2021) ಅಕ್ಟೋಬರ್ ತಿಂಗಳಲ್ಲಿ ದೇಶದಲ್ಲಿ ಒಟ್ಟು 103 ಗಿಗಾವಾಟ್​ ಸಾಮರ್ಥ್ಯದ ಸೌರ ಹಾಗೂ ಪವನ ವಿದ್ಯುತ್ ಘಟಕಗಳಿದ್ದವು. ಈ ಪ್ರಮಾಣವು ಈ ವರ್ಷ (2022) 119 ಗಿಗಾವಾಟ್​ಗೆ ಏರಿಕೆಯಾಗಿದೆ. ನವೀಕರಣಗಳಿಸಬಹುದಾದ ಪರಿಸರಸ್ನೇಹಿ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್​ ಪ್ರಮಾಣ ಭಾರತದಲ್ಲಿ ಹೆಚ್ಚಾಗುತ್ತಿರುವುದು ಪರಿಸರಕ್ಕೂ ಒಳ್ಳೆಯದು. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಅಥವಾ ಇತರ ಘಟಕಗಳಿಂದ ಉತ್ಪಾದನೆಯಾಗುವ ವಿದ್ಯುತ್​ಗಿಂತಲೂ ಪರಿಸರಸ್ನೇಹಿ ವಿದ್ಯುತ್​ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ. ಅದು ಭಾರತಕ್ಕೆ ಮಾತ್ರವಲ್ಲ, ವಿಶ್ವದ ಪರಿಸರಕ್ಕೂ ಒಳ್ಳೆಯದು.

ಆರ್ಥಿಕತೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Fri, 2 December 22

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು