ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬಳಿಕ ಎಲ್ಲರ ಗಮನ ಭಾರತದ ಬಾಹ್ಯಾಕಾಶ ಉದ್ಯಮದ ಇನ್ಫ್ರಾಸ್ಟ್ರಕ್ಚರ್ನತ್ತ ನೆಟ್ಟಿದೆ. ಭಾರತದ ಚಂದ್ರಯಾನ (Chandrayaan-3) ಯಶಸ್ಸು ಸಾಧಾರಣವಾದುದಲ್ಲ. ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡ ಈ ಯೋಜನೆ ಭಾರತದ ಕೀರ್ತಿಪತಾಕೆ ಹಾರಿಸಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ (Moon South Pole) ಮೊದಲು ಮುಟ್ಟಿದ ದೇಶ ಭಾರತವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಬಿಟ್ಟರೆ ಚಂದಿರ ಅಂಗಳ ತಲುಪಿದ ದೇಶ ಭಾರತವಾಗಿದೆ. ಅತೀ ಕಡಿಮೆ ಬಜೆಟ್ನಲ್ಲಿ ಚಂದ್ರಯಾನ ರೂಪುಗೊಂಡಿದ್ದು ಭಾರತದ ತಾಂತ್ರಿಕ ನಿಪುಣತೆಗೆ ಸಾಕ್ಷಿಯಾಗಿದೆ. ಈ ಯೋಜನೆ ಯಶಸ್ಸಿಗೆ ಇಸ್ರೋ ಜೊತೆ ಹಲವು ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ಸಹಕಾರ ಇದ್ದದ್ದು ವಿಶೇಷ. ಮುಂದೆಯೂ ಭಾರತದಿಂದ ಹಲವು ಬಾಹ್ಯಾಕಾಶ ಯೋಜನೆಗಳು ನಡೆಯಲಿರುವುದರಿಂದ ಡಿಫೆನ್ಸ್, ಸ್ಪೇಸ್ ಕ್ಷೇತ್ರದಲ್ಲಿರುವ ಕಂಪನಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರುವುದು ಹೌದು.
ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯಿಂದ ಷೇರುಪೇಟೆಯಲ್ಲಿ ಲಾಭ ಮಾಡಬಲ್ಲ ಕಂಪನಿಗಳನ್ನು ಗುರುತಿಸಲಾಗುತ್ತಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಇಂಥ 13 ಕಂಪನಿಗಳನ್ನು ಕೆಲ ತಜ್ಞರು ಹೆಸರಿಸಿದ್ದು, ಇವುಗಳ ಮೇಲೆ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆ ಹೆಚ್ಚು ಎಂದು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಚಂದ್ರಯಾನ ಯಶಸ್ಸಿನಲ್ಲಿ ಭಾಗಿದಾರರಾದ ಪ್ರಮುಖ 10 ಸಂಸ್ಥೆಗಳು ಮತ್ತವುಗಳ ಕೊಡುಗೆ
ಜಾಗತಿಕವಾಗಿ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆ ಅಗಾಧವಾಗಿದೆ. ಈ ಆರ್ಥಿಕತೆಯಲ್ಲಿ ಭಾರತದ ಕೊಡುಗೆ ಸದ್ಯ ಶೇ. 2-3 ರಷ್ಟಿದೆ. ಮುಂದಿನ ಎಂಟತ್ತು ವರ್ಷಗಳಲ್ಲಿ ಈ ಪ್ರಮಾಣವು ಶೇ. 10ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ರಾಕೆಟ್ ಸ್ಪೀಡ್ನಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಭಾರತದ ಬಳಿ ಇರುವ ರಾಕೆಟ್ಗಳು ಕಡಿಮೆ ಶಕ್ತಿಯದ್ದಾಗಿದ್ದರೂ ಭೂಮಿಯ ಕೆಳ ಕಕ್ಷೆಗಳಿಗೆ ಉಪಗ್ರಹ ತಲುಪಿಸಲು ಸಮರ್ಥವಾಗಿವೆ. ಬಹಳ ಕಡಿಮೆ ದರದಲ್ಲಿ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಬಲ್ಲುದು. ಈಗಾಗಲೇ ಸಾಕಷ್ಟು ದೇಶಗಳಿಂದ ಗ್ರಾಹಕರು ಉಪಗ್ರಹ ಉಡಾವಣೆಗೆ ಇಸ್ರೋ ನೆರವು ಪಡೆಯುತ್ತಿದ್ದಾರೆ.
ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ವಲಯಕ್ಕೂ ಮುಕ್ತ ಅವಕಾಶ ಕೊಡಲಾಗಿದೆ. ಇಸ್ರೋದಂತೆ ಖಾಸಗಿ ಕಂಪನಿಗಳೂ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಭಾರತದಲ್ಲಿ 140ಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್ಗಳಿವೆ. ಈಗ ಚಂದ್ರಯಾನ ಯಶಸ್ವಿಯಾಗಿರುವುದರಿಂದ ಭಾರತದ ಸ್ಪೇಸ್ ಕಂಪನಿಗಳ ಮೇಲೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಬಹುದು. ಹೀಗಾಗಿ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿರುವ ಕಂಪನಿಗಳು ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಸಾಧಿಸುವ ಎಲ್ಲಾ ಲಕ್ಷಣಗಳು ಮತ್ತು ವಾತಾವರಣ ಇವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ