ಚಂದ್ರಯಾನ 3 ಯಶಸ್ಸು, ಷೇರುಪೇಟೆ ಮೇಲೇನು ಪರಿಣಾಮ? ಯಾವ್ಯಾವ ಸ್ಟಾಕುಗಳಿಗೆ ಡಿಮ್ಯಾಂಡ್? ಇಲ್ಲಿದೆ ತಜ್ಞರ ಶಿಫಾರಸು

Chandrayaan Success Effect: ಚಂದ್ರಯಾನ ಯೋಜನೆ ಯಶಸ್ವಿಯಾಗಿದ್ದೇ ಬಂತು ಈಗ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಕಂಪನಿಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಯೋಜನೆಯಲ್ಲಿ ಕೈಜೋಡಿಸಿದ ಲಿಸ್ಟೆಡ್ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಬಹುದು. ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.

Important Highlight‌
ಚಂದ್ರಯಾನ 3 ಯಶಸ್ಸು, ಷೇರುಪೇಟೆ ಮೇಲೇನು ಪರಿಣಾಮ? ಯಾವ್ಯಾವ ಸ್ಟಾಕುಗಳಿಗೆ ಡಿಮ್ಯಾಂಡ್? ಇಲ್ಲಿದೆ ತಜ್ಞರ ಶಿಫಾರಸು
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2023 | 1:05 PM

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬಳಿಕ ಎಲ್ಲರ ಗಮನ ಭಾರತದ ಬಾಹ್ಯಾಕಾಶ ಉದ್ಯಮದ ಇನ್​ಫ್ರಾಸ್ಟ್ರಕ್ಚರ್​ನತ್ತ ನೆಟ್ಟಿದೆ. ಭಾರತದ ಚಂದ್ರಯಾನ (Chandrayaan-3) ಯಶಸ್ಸು ಸಾಧಾರಣವಾದುದಲ್ಲ. ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡ ಈ ಯೋಜನೆ ಭಾರತದ ಕೀರ್ತಿಪತಾಕೆ ಹಾರಿಸಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ (Moon South Pole) ಮೊದಲು ಮುಟ್ಟಿದ ದೇಶ ಭಾರತವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಬಿಟ್ಟರೆ ಚಂದಿರ ಅಂಗಳ ತಲುಪಿದ ದೇಶ ಭಾರತವಾಗಿದೆ. ಅತೀ ಕಡಿಮೆ ಬಜೆಟ್​ನಲ್ಲಿ ಚಂದ್ರಯಾನ ರೂಪುಗೊಂಡಿದ್ದು ಭಾರತದ ತಾಂತ್ರಿಕ ನಿಪುಣತೆಗೆ ಸಾಕ್ಷಿಯಾಗಿದೆ. ಈ ಯೋಜನೆ ಯಶಸ್ಸಿಗೆ ಇಸ್ರೋ ಜೊತೆ ಹಲವು ಸರ್ಕಾರಿ ಮತ್ತು ಖಾಸಗಿ ಉದ್ದಿಮೆಗಳ ಸಹಕಾರ ಇದ್ದದ್ದು ವಿಶೇಷ. ಮುಂದೆಯೂ ಭಾರತದಿಂದ ಹಲವು ಬಾಹ್ಯಾಕಾಶ ಯೋಜನೆಗಳು ನಡೆಯಲಿರುವುದರಿಂದ ಡಿಫೆನ್ಸ್, ಸ್ಪೇಸ್ ಕ್ಷೇತ್ರದಲ್ಲಿರುವ ಕಂಪನಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿರುವುದು ಹೌದು.

ಭಾರತದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯಿಂದ ಷೇರುಪೇಟೆಯಲ್ಲಿ ಲಾಭ ಮಾಡಬಲ್ಲ ಕಂಪನಿಗಳನ್ನು ಗುರುತಿಸಲಾಗುತ್ತಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಇಂಥ 13 ಕಂಪನಿಗಳನ್ನು ಕೆಲ ತಜ್ಞರು ಹೆಸರಿಸಿದ್ದು, ಇವುಗಳ ಮೇಲೆ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆ ಹೆಚ್ಚು ಎಂದು ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: ಚಂದ್ರಯಾನ ಯಶಸ್ಸಿನಲ್ಲಿ ಭಾಗಿದಾರರಾದ ಪ್ರಮುಖ 10 ಸಂಸ್ಥೆಗಳು ಮತ್ತವುಗಳ ಕೊಡುಗೆ

ಭಾರತದ ಬಾಹ್ಯಾಕಾಶ ಯೋಜನೆಯ ವರದಾನ ಪಡೆಯುವ ಕಂಪನಿಗಳಿವು

  • ಲಾರ್ಸನ್ ಅಂಡ್ ಟೌಬ್ರೋ (ಎಲ್ ಅಂಡ್ ಟಿ)
  • ಬಿಎಚ್​ಇಎಲ್
  • ಸೆಂಟ್ರಮ್ ಎಲೆಕ್ಟ್ರಾನಿಕ್ಸ್
  • ಹೆಚ್​ಎಎಲ್
  • ಲಿಂಡೆ ಇಂಡಿಯಾ
  • ಪರಸ್ ಡಿಫೆನ್ಸ್
  • ವಾಲ್​ಚಂದ್ ನಗರ್ ಇಂಡಸ್ಟ್ರೀಸ್
  • ಭಾರತ್ ಫೋರ್ಜ್
  • ಆಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್
  • ಅವನ್​ಟೆಲ್
  • ಎಂಟಿಎಆರ್ ಟೆಕ್ನಾಲಜೀಸ್
  • ಬಿಇಎಲ್

ಭಾರತದ ಬಾಹ್ಯಾಕಾಶ ಕ್ಷೇತ್ರ ಬೆಳವಣಿಗೆ ಎಷ್ಟಿದೆ?

ಜಾಗತಿಕವಾಗಿ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆ ಅಗಾಧವಾಗಿದೆ. ಈ ಆರ್ಥಿಕತೆಯಲ್ಲಿ ಭಾರತದ ಕೊಡುಗೆ ಸದ್ಯ ಶೇ. 2-3 ರಷ್ಟಿದೆ. ಮುಂದಿನ ಎಂಟತ್ತು ವರ್ಷಗಳಲ್ಲಿ ಈ ಪ್ರಮಾಣವು ಶೇ. 10ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್​ ಬೆನ್ನಲ್ಲೇ ರಾಕೆಟ್​ ಸ್ಪೀಡ್​ನಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿದ ಡಿಕೆ ಶಿವಕುಮಾರ್​

ಭಾರತದ ಬಳಿ ಇರುವ ರಾಕೆಟ್​ಗಳು ಕಡಿಮೆ ಶಕ್ತಿಯದ್ದಾಗಿದ್ದರೂ ಭೂಮಿಯ ಕೆಳ ಕಕ್ಷೆಗಳಿಗೆ ಉಪಗ್ರಹ ತಲುಪಿಸಲು ಸಮರ್ಥವಾಗಿವೆ. ಬಹಳ ಕಡಿಮೆ ದರದಲ್ಲಿ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಬಲ್ಲುದು. ಈಗಾಗಲೇ ಸಾಕಷ್ಟು ದೇಶಗಳಿಂದ ಗ್ರಾಹಕರು ಉಪಗ್ರಹ ಉಡಾವಣೆಗೆ ಇಸ್ರೋ ನೆರವು ಪಡೆಯುತ್ತಿದ್ದಾರೆ.

ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ವಲಯಕ್ಕೂ ಮುಕ್ತ ಅವಕಾಶ ಕೊಡಲಾಗಿದೆ. ಇಸ್ರೋದಂತೆ ಖಾಸಗಿ ಕಂಪನಿಗಳೂ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಭಾರತದಲ್ಲಿ 140ಕ್ಕೂ ಹೆಚ್ಚು ನೊಂದಾಯಿತ ಸ್ಟಾರ್ಟಪ್​ಗಳಿವೆ. ಈಗ ಚಂದ್ರಯಾನ ಯಶಸ್ವಿಯಾಗಿರುವುದರಿಂದ ಭಾರತದ ಸ್ಪೇಸ್ ಕಂಪನಿಗಳ ಮೇಲೆ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಬಹುದು. ಹೀಗಾಗಿ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದಲ್ಲಿರುವ ಕಂಪನಿಗಳು ಗಮನಾರ್ಹ ರೀತಿಯಲ್ಲಿ ಬೆಳವಣಿಗೆ ಸಾಧಿಸುವ ಎಲ್ಲಾ ಲಕ್ಷಣಗಳು ಮತ್ತು ವಾತಾವರಣ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು