ಆಗಸ್ಟ್ ತಿಂಗಳಿನಲ್ಲಿ ಹಲವಾರು ಹೊಸ ಕಾರುಗಳು(New Cars) ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಜೊತೆಗೆ ಸಿಎನ್ ಜಿ ಮತ್ತು ಎಲೆಕ್ಟ್ರಿಕ್ ಕಾರುಗಳ ಸಹ ಬಿಡುಗಡೆಯಾಗಲಿವೆ. ಹಾಗಾದ್ರೆ ಈ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.
ಟಾಟಾ ಪಂಚ್ ಸಿಎನ್ ಜಿ
ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿವೆ ಹೊಸ ಕಾರು ಮಾದರಿಗಳಲ್ಲಿ ಟಾಟಾ ಪಂಚ್ ಸಿಎನ್ ಜಿ ಸಹ ಒಂದಾಗಿದ್ದು, ಇದು ಹ್ಯುಂಡೈ ಎಕ್ಸ್ ಟರ್ ಸಿಎನ್ ಜಿ ಮಾದರಿಗೆ ಪೈಪೋಟಿಯಾಗಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಪಂಚ್ ಸಿಎನ್ ಜಿ ಕಾರು ಮಾದರಿಯು ಟಿಯಾಗೋ ಸಿಎನ್ ಜಿ ಮಾದರಿಯಲ್ಲಿರುವ ಹಲವಾರು ತಂತ್ರಜ್ಞಾನಗಳನ್ನು ಹಂಚಿಕೊಳ್ಳಲಿದ್ದು, ಇದರಲ್ಲಿ ಡ್ಯುಯಲ್ ಸಿಲಿಂಡರ್ ಮೂಲಕ ಅತ್ಯುತ್ತಮ ಬೂಟ್ ಸ್ಪೆಸ್ ಒದಗಿಸಲಾಗಿದೆ. ಇದು ಪ್ರತಿ ಕೆಜಿ ಸಿಎನ್ ಜಿ ಗೆ 24 ರಿಂದ 26 ಕಿ.ಮೀ ಮೈಲೇಜ್ ನೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.
ಟೊಯೊಟಾ ರೂಮಿಯನ್ ಎಂಪಿವಿ
ಮಾರುತಿ ಸುಜುಕಿ ಜೊತೆಗೂಡಿ ಈಗಾಗಲೇ ಹಲವಾರು ಕಾರು ಮಾದರಿಗಳ ರೀಬ್ಯಾಡ್ಜ್ ಆವೃತ್ತಿಗಳನ್ನು ಬಿಡುಗಡೆ ಮಾಡಿರುವ ಟೊಯೊಟಾ ಕಂಪನಿಯು ಇದೀಗ ಎರ್ಟಿಗಾ ಆಧರಿತ ರೂಮಿಯನ್ ಎಂಪಿವಿ ಬಿಡುಗಡೆ ಮಾಡುತ್ತಿದೆ. ಇದು ಎರ್ಟಿಗಾ ಮಾದರಿಯಲ್ಲೇ ಫೀಚರ್ಸ್ ಪಡೆದುಕೊಳ್ಳಲಿದ್ದು, ಬಜೆಟ್ ಬೆಲೆಯ ಟೊಯೊಟಾ ಎಂಪಿವಿ ಖರೀದಿದಾರರನ್ನು ಸೆಳೆಯಲಿದೆ. ಇದು ಎರ್ಟಿಗಾ ಕಾರಿಗಿಂತಲೂ ತುಸು ದುಬಾರಿಯಾಗಿರಲಿದ್ದು, ಕೆಲವು ಹೊಸ ಫೀಚರ್ಸ್ ಗಳು ಗಮನಸೆಳೆಯಲಿವೆ.
ಇದನ್ನೂ ಓದಿ: ಪನೊರಮಿಕ್ ಸನ್ ರೂಫ್ ಹೊಂದಿರುವ ಕಾರುಗಳಿವು!
ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಜರ್ ಸ್ಪೆಷಲ್ ಎಡಿಷನ್
ಹ್ಯುಂಡೈ ಇಂಡಿಯಾ ಕಂಪನಿಯು ಕ್ರೆಟಾ ಮತ್ತು ಅಲ್ಕಾಜರ್ ಎಸ್ ಯಿವಿ ಮಾದರಿಗಳಾಗಿ ಶೀಘ್ರದಲ್ಲಿಯೇ ಸ್ಪೆಷಲ್ ಅಡ್ವೆಂಚರ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯು ಆಫ್ ರೋಡ್ ಕೌಶಲ್ಯ ಪೂರಕವಾದ ಕೆಲವು ವಿಶೇಷ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ. ಹೊಸ ಕಾರುಗಳ ಎಂಜಿನ್ ಆಯ್ಕೆಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಮುಂದುವರೆಯಲಿದ್ದು, ಹೊಸ ಕಾರು ಟಾಪ್ ಎಂಡ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿವೆ.
ವೊಲ್ವೊ ಸಿ40 ಕ್ರಾಸ್ ಓವರ್ ಎಲೆಕ್ಟ್ರಿಕ್
ವೊಲ್ವೊ ಕಂಪನಿಯು ಭಾರತದಲ್ಲಿ ಸದ್ಯ ಎಕ್ಸ್ ಸಿ40 ರೀಚಾರ್ಜ್ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಕಾರು ಕ್ರಾಸ್ ಓವರ್ ಎಸ್ ಯುವಿ ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರು ಎಕ್ಸ್ ಸಿ40 ರೀಚಾರ್ಜ್ ಕಾರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಪ್ರತಿ ಚಾರ್ಜ್ ಗೆ 530 ಕಿ.ಮೀ ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್ ಜಿ ವರ್ಷನ್ ಬಿಡುಗಡೆ
ಕ್ಯೂ8 ಇ-ಟ್ರಾನ್ ಎಲೆಕ್ಟ್ರಿಕ್
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಆಡಿ ಇಂಡಿಯಾ ಶೀಘ್ರದಲ್ಲಿಯೇ ಕ್ಯೂ8 ಇ-ಟ್ರಾಸ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಎಸ್ ಯುವಿ ಮತ್ತು ಕೂಪೆ ವೈಶಿಷ್ಟ್ಯತೆಗಳೊಂದಿಗೆ ಖರೀದಿಗೆ ಲಭ್ಯವಿರಲಿವೆ. ಹೊಸ ಕಾರು 95kWh ಮತ್ತು 114kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ಇವು ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 600 ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.
ಮರ್ಸಿಡಿಸ್ ನ್ಯೂ ಜನರೇಷನ್ ಜಿಎಲ್ ಸಿ
ದೇಶದ ಜನಪ್ರಿಯ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಮರ್ಸಿಡಿಸ್ ಬೆಂಝ್ ಶೀಘ್ರದಲ್ಲಿಯೇ ಹೊಸ ತಲೆಮಾರಿನ ಜಿಎಲ್ ಸಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು 2.0 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ 48 ವೊಲ್ಟ್ ಇಂಟ್ರಾಗ್ರೆಟೆಡ್ ಸ್ಟಾರ್ಟರ್ ಮೋಟಾರ್ ಪಡೆದುಕೊಳ್ಳಲಿದೆ. ಈ ಮೂಲಕ ಹೊಸ ಕಾರು ಈ ಬಾರಿ ಸಿ ಕ್ಲಾಸ್ ಮಾದರಿಂದಲೂ ಹಲವು ಹೊಸ ಫೀಚರ್ಸ್ ಗಳನ್ನು ಹಂಚಿಕೊಳ್ಳಲಿದ್ದು, ದುಬಾರಿ ಬೆಲೆ ಪಡೆದುಕೊಂಡಿರಲಿದೆ.