ನಮ್ಮ ಬೆಂಗಳೂರಿಗೆ ಲಗ್ಗೆಯಿಟ್ಟ ಸೂಪರ್ ಫೀಚರ್ಸ್ ಪ್ರೇರಿತ ಟಾರ್ಕ್ ಮೋಟಾರ್ಸ್ ಕ್ರೇಟಸ್-ಆರ್ ಇವಿ ಬೈಕ್
ಎಲೆಕ್ಟ್ರಿಕ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ಟಾರ್ಕ್ ಮೋಟರ್ಸ್ ಬೆಂಗಳೂರಿನಲ್ಲಿ ಇಂದು ತನ್ನ ಮೊದಲ ಅನುಭವ ವಲಯ (Experience Zone) ಉದ್ಘಾಟಿಸಿದ್ದು, ತನ್ನ ವಿನೂತನ ಕ್ರೇಟಸ್-ಆರ್ ಇವಿ ಬೈಕ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದರಿಂದ ಟಾರ್ಕ್ ಮೋಟಾರ್ಸ್(Tork Motors) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ ಬೈಕ್ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದೀಗ ಕಂಪನಿಯು ದೇಶಾದ್ಯಂತ ತನ್ನ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ. ಇವಿ ಬೈಕ್ ಮಾರಾಟ ಮಳಿಗೆಗಳನ್ನು ಟಾರ್ಕ್ ಮೋಟಾರ್ಸ್ ಕಂಪನಿಯು ಅನುಭವ ವಲಯಗಳೆಂದು ಘೋಷಿಸಿದ್ದು, ಇಂದು ನಮ್ಮ ಬೆಂಗಳೂರಿನಲ್ಲಿ ಮೊದಲ ಮಾರಾಟ ಮಳಿಗೆಗೆ ಚಾಲನೆ ನೀಡಿತು.
ನಮ್ಮ ಬೆಂಗಳೂರಿನ ಜಯನಗರದ 5ನೇ ಬ್ಲಾಕ್‌ನಲ್ಲಿ ಟಾರ್ಕ್ ಮೋಟಾರ್ಸ್ ಹೊಸ ಮಾರಾಟ ಮಳಿಗೆ ಆರಂಭವಾಗಿದ್ದು, ಹೊಸ ಮಾರಾಟ ಮಳಿಗೆಯು 3ಎಸ್( ಸೇಲ್ಸ್, ಸರ್ವಿಸ್ ಮತ್ತು ಸ್ಪೆರ್ ಪಾರ್ಟ್ಸ್) ಸೌಲಭ್ಯವನ್ನು ಒಳಗೊಂಡಿದೆ. 3ಎಸ್ ಸೌಲಭ್ಯವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಸರ್ವಿಸ್ ಮತ್ತು ಬಿಡಿಭಾಗಗಳ ಲಭ್ಯತೆಯು ಹೊಸ ಬೈಕ್ ಮಾರಾಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.
ಟಾರ್ಕ್ ಮೋಟಾರ್ಸ್ ಕಂಪನಿಯು ಈ ವರ್ಷಾಂತ್ಯಕ್ಕೆ ದೇಶಾದ್ಯಂತ ಒಟ್ಟು 100 ಅನುಭವ ವಲಯಗಳನ್ನು ತೆರೆಯುವ ಯೋಜನೆಯಲಿದ್ದು, ಕರ್ನಾಟಕದಲ್ಲಿ ಒಟ್ಟು ಎರಡು ಮಾರಾಟ ಮಳಿಗೆಗಳನ್ನು ತೆರೆದಂತಾಗಿದೆ. ಹುಬ್ಬಳ್ಳಿಯಲ್ಲಿ ತನ್ನ ಮೊದಲ ಮಾರಾಟ ಮಳಿಗೆ ತೆರೆದಿದ್ದ ಟಾರ್ಕ್ ಮೋಟಾರ್ಸ್ ಕಂಪನಿಯು ಇದೀಗ ನಮ್ಮ ಬೆಂಗಳೂರಿಗೆ ಅಧಿಕೃತವಾಗಿ ಪ್ರವೇಶಿಸಿದ್ದು, ಕ್ರೇಟಸ್-ಆರ್(KRATOS-R) ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ಜೊತೆ ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಓಕಿ-90 ಇವಿ ಸ್ಕೂಟರ್ ಬಿಡುಗಡೆ
ಹೊಸ ಇವಿ ಬೈಕ್ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಿಇಒ ಕಪಿಲ್ ಶೆಲ್ಕೆ ಅವರು ಬೆಂಗಳೂರಿನಲ್ಲಿ ಮೊದಲ ಮಾರಾಟ ಮಳಿಗೆ ಆರಂಭಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಬೆಂಗಳೂರು ಸದ್ಯ ತಂತ್ರಜ್ಞಾನ ರಾಜಧಾನಿ ಎಂಬ ಶ್ಲಾಘನೆ ಪಡೆದುಕೊಂಡಿದ್ದು, ಇದರಿಂದ ಇದು ನಮಗೆ ಅತ್ಯಂತ ಮಹತ್ವದ ಮಾರುಕಟ್ಟೆಯಾಗಿದೆ ಎಂದಿದ್ದಾರೆ. ಜೊತೆಗೆ ಬೆಂಗಳೂರಿನ ತಂತ್ರಜ್ಞಾನ ಪ್ರೇಮಿಗಳು ಮತ್ತು ಮೋಟರ್‌ಸೈಕಲ್ ಉತ್ಸಾಹಿಗಳಿಗೆ ಹೊಸ ಕ್ರೇಟಸ್-ಆರ್ ಇವಿ ಬೈಕ್ ಮಾದರಿಯು ಖಂಡಿತವಾಗಿಯೂ ಇಷ್ಟವಾಗುವ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದಿದ್ದಾರೆ.
ಇನ್ನು ಟಾರ್ಕ್ ಮೋಟಾರ್ಸ್ ಹೊಸ ಕ್ರೇಟಸ್-ಆರ್ ಇವಿ ಬೈಕ್ ಮಾದರಿಯು ಅತ್ಯಾಧುನಿಕ ತಂತ್ರಜ್ಞಾನ, ಉಲ್ಲಾಸದಾಯಕ ಕಾರ್ಯಕ್ಷಮತೆ ಜೊತೆಗೆ ಆಕರ್ಷಕ ಬೆಲೆ ಸಂಯೋಜನೆ ಹೊಂದಿದ್ದು, ಇದು ತನ್ನ ವಿಭಾಗದ ಇವಿ ಬೈಕ್ ಮಾದರಿಗಳಲ್ಲಿಯೇ ಹಲವಾರು ವಿಭಿನ್ನತೆಗಳಿಂದ ಗುರುತಿಸಿಕೊಂಡಿದೆ. ಗಮನ ಸೆಳೆಯುವ ಕಟಿಂಗ್ ಎಡ್ಜ್ ವಿನ್ಯಾಸ, ಸವಾರರ ಅಗತ್ಯಗಳನ್ನು ಈಡೇರಿಸುವ ಹಲವಾರು ಫೀಚರ್ಸ್ ಮತ್ತು ಹೆಚ್ಚಿನ ದಕ್ಷತೆಯ ಚಾಸಿಸ್ ಒಳಗೊಂಡಿದೆ.
ಕ್ರೇಟಸ್-ಆರ್ ಇವಿ ಬೈಕ್ ಮಾದರಿಯಲ್ಲಿ ಐಪಿ 67 ಮಾನದಂಡಗಳನ್ನು ಒಳಗೊಂಡಿರುವ 4.0 ಕೆಡಬ್ಲ್ಯುಎಚ್‌ಲಿ–ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ ಇತ್ತೀಚೆಗೆ ಪೇಟೆಂಟ್ ಪಡೆದಿರುವ 9ಕೆಡಬ್ಲ್ಯು ‘ಆ್ಯಕ್ಸಿಯಲ್ ಫ್ಲಕ್ಸ್’ ಮೋಟಾರ್ ಪಡೆದುಕೊಂಡಿದೆ. ಇದು ಶೇ. 96ರಷ್ಟು ದಕ್ಷತೆಯೊಂದಿಗೆ ಗರಿಷ್ಠ 38 ಎನ್‌ಎಂ ಟಾರ್ಕ್ ಉತ್ಪಾದಿಸಲಿದ್ದು, ಈ ಮೂಲಕ ಇದು ಪ್ರತಿ ಚಾರ್ಜ್ ಗೆ ಗರಿಷ್ಠ 180 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಇದನ್ನೂ ಓದಿ: ರೂ. 3 ಲಕ್ಷಕ್ಕೆ ಲಭ್ಯ ಬೆಸ್ಟ್ ಮಾರ್ಡನ್ ಕ್ಲಾಸಿಕ್ ಬೈಕ್ ಗಳಿವು..
ಹೊಸ ಇವಿ ಬೈಕ್ ಮಾದರಿಯಲ್ಲಿ ಟಾರ್ಕ್ ಮೋಟಾರ್ಸ್ ಕಂಪನಿಯು ಸವಾರರಿಗೆ ಅನುಕೂಲಕರವಾಗುವಂತೆ ಇಕೊ, ಸಿಟಿ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ಜೋಡಿಸಿದ್ದು, ಸ್ಪೋರ್ಟ್ ಮೋಡ್‌ನಲ್ಲಿ ಗರಿಷ್ಠ ವೇಗ ಪಡೆದುಕೊಳ್ಳಬಹುದಾದರೆ ಇಕೋ ಮೋಡ್ ನಲ್ಲಿ ಹೆಚ್ಚಿನ ಮೈಲೇಜ್ ನೀರಿಕ್ಷೆ ಮಾಡಬಹುದಾಗಿದೆ. ಹಾಗೆಯೇ ಹೊಸ ಬೈಕ್ ಮಾದರಿಯಲ್ಲಿ ಸೊಗಸಾದ ವಿನ್ಯಾಸಗಳಿದ್ದು, ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ನೊಂದಿಗೆ ಅಭಿವೃದ್ದಿಗೊಂಡಿದೆ.
ಇದಲ್ಲದೆ ಹೊಸ ಇವಿ ಬೈಕ್ ಖರೀದಿಗಾಗಿ ಟಾರ್ಕ್ ಮೋಟಾರ್ಸ್ ಕಂಪನಿಯು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಅತಿ ಕಡಿಮೆ ಇಎಂಐ ದರಗಳೊಂದಿಗೆ ಗರಿಷ್ಠ ಮಟ್ಟದ ಸಾಲಸೌಲಭ್ಯಗಳನ್ನು ಒದಗಿಸುತ್ತದೆ. ಪ್ರತಿ ತಿಂಗಳಿಗೆ ಕನಿಷ್ಠ ರೂ. 2,999 ದರಗಳೊಂದಿಗೆ ಇಎಂಐ ಆಯ್ಕೆಗಳು ಲಭ್ಯವಿದ್ದು, ಆಸಕ್ತ ಗ್ರಾಹಕರು www.booking.torkmotors.com ಜಾಲತಾಣಕ್ಕೆ ಭೇಟಿ ನೀಡಿ ಬುಕ್ ಮಾಡಬಹುದಾಗಿದೆ.
Published On - 7:08 pm, Fri, 28 July 23