ದೇಶದ ಅಗ್ರ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್(Hero Motocorp) ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಡೆಸ್ಟಿನಿ 125 ಪ್ರೈಮ್(Destini 125 Prime) ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. ರೂ.71,499 ಬೆಲೆ ಹೊಂದಿದೆ.
ಹೊಸ ಡೆಸ್ಟಿನಿ 125 ಪ್ರೈಮ್ ವೆರಿಯೆಂಟ್ ಸದ್ಯ ಖರೀದಿಗೆ ಲಭ್ಯವಿರುವ ಡೆಸ್ಟಿನಿ 125 ಎಕ್ಸ್ ಟೆಕ್ ವೆರಿಯೆಂಟ್ ಗೆ ಹೋಲಿಸಿದರೆ ಕಡಿಮೆ ಬೆಲೆ ಹೊಂದಿದ್ದು, ಟಾಪ್ ಎಂಡ್ ವೆರಿಯೆಂಟ್ ಸ್ಮಾರ್ಟ್ ಕನೆಕ್ಟ್ ಸೌಲಭ್ಯಗಳೊಂದಿಗೆ ರೂ.14,239 ಹೆಚ್ಚುವರಿ ಬೆಲೆ ಹೊಂದಿದೆ. ಆದರೆ ಹೊಸ ವೆರಿಯೆಂಟ್ ನಲ್ಲಿ ಬೆಲೆ ಇಳಿಕೆಗಾಗಿ ಕೆಲವು ಟೆಕ್ ಫೀಚರ್ಸ್ ತೆಗೆದುಹಾಕಲಾಗಿದ್ದು, ಪ್ರತಿ ಸ್ಪರ್ಧಿ ಮಾದರಿಯಾದ ಹೋಂಡಾ ಡಿಯೋ 125 ಮಾದರಿಗೆ ಪೈಪೋಟಿಯಾಗಿ ಪರಿಚಯಿಸಲಾಗಿದೆ.
ಇದನ್ನೂ ಓದಿ: ನಾಲ್ಕು ಹೊಸ ಓಲಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಗಳು ಅನಾವರಣ
ಸ್ಮಾರ್ಟ್ ಕನೆಕ್ಟ್ ಫೀಚರ್ಸ್ ತೆಗೆದುಹಾಕಿದ ನಂತರವು ಹೊಸ ವೆರಿಯೆಂಟ್ ನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳಿದ್ದು, ಆಟೋ ಸ್ಟಾರ್ಟ್/ಸ್ಟಾಪ್, ಸೆಮಿ ಡಿಜಿಟಲ್ ಕನ್ಸೋಲ್ ಜೋಡಿಸಲಾಗಿದೆ. ಹಾಗೆಯೇ ಅಲಾಯ್ ವೀಲ್ಸ್ ಬದಲಾಗಿ ಸ್ಟೀಲ್ ವೀಲ್ಹ್ ನೀಡಲಾಗಿದ್ದು, ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಬದಿಯಲ್ಲಿ ಮೊನೊಶಾಕ್ ಸೆಟಪ್ ಮತ್ತು ಎರಡು ಬದಿ ಚಕ್ರದಲ್ಲೂ ಡ್ರಮ್ ಬ್ರೇಕ್ ನೀಡಲಾಗಿದೆ.
ಎಂಜಿನ್ ಮತ್ತು ಮೈಲೇಜ್
ಹೊಸ ಡೆಸ್ಟಿನಿ 125 ಪ್ರೈಮ್ ವೆರಿಯೆಂಟ್ ನಲ್ಲಿ 124.6 ಸಿಸಿ ಏರ್ ಕೂಲ್ಡ್ ಎಂಜಿನ್ ನೀಡಲಾಗಿದ್ದು, ಇದು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 9 ಹಾರ್ಸ್ ಪವರ್ ಮತ್ತು 10.36 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಪ್ರತಿ ಲೀಟರ್ ಗೆ ವಿವಿಧ ರೈಡಿಂಗ್ ಶೈಲಿ ಆಧರಿಸಿ 45 ರಿಂದ 50 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಮೂಲಕ ಇದು 125 ಸಿಸಿ ವಿಭಾಗದಲ್ಲಿನ ಹೋಂಡಾ ಡಿಯೋ 125, ಟಿವಿಎಸ್ ಜೂಪಿಟರ್ 125, ಯಮಹಾ ಫ್ಯಾಸಿನೊ 125 ಹಾಗೂ ಸುಜುಕಿ ಆಕ್ಸಸ್ 125 ಸ್ಕೂಟರ್ ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.