Ather 450S: ಬಜೆಟ್ ಬೆಲೆಯ ಎಥರ್ 450ಎಸ್ ಇವಿ ಸ್ಕೂಟರ್ ಬಿಡುಗಡೆ

| Updated By: Praveen Sannamani

Updated on: Aug 11, 2023 | 8:25 PM

ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಗೆ ಬೇಡಿಕೆಗೆ ಅನುಗುಣವಾಗಿ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ(Ather Energy) ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ 450ಎಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಆವೃತ್ತಿಯು ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೊಸ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ.1.30 ಲಕ್ಷ ಬೆಲೆ ಹೊಂದಿದ್ದು, ಇದು ಪ್ರಸ್ತತ ಮಾರುಕಟ್ಟೆಯಲ್ಲಿರುವ 450ಎಕ್ಸ್ ಮಾದರಿಗಿಂತಲೂ ಕಡಿಮೆ ಬೆಲೆಯೊಂದಿಗೆ ಮಾರಾಟಗೊಳ್ಳಲಿದೆ. ಹೊಸ ಇವಿ ಸ್ಕೂಟರ್ ಮಾದರಿಯ ಬೆಲೆ ಇಳಿಕೆಗಾಗಿ ಕೆಲವು ಪ್ರಮುಖ ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದು, ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ನೊಂದಿಗೆ ಪ್ರಮುಖ ಸ್ಟ್ಯಾಂಡರ್ಡ್ ಫೀಚರ್ಸ್ ಗಳೊಂದಿಗೆ ಖರೀದಿಗೆ ಲಭ್ಯವಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ಜೊತೆ ಹೊಸ ಫೀಚರ್ಸ್ ಗಳೊಂದಿಗೆ ನವೀಕೃತ ಓಕಿ-90 ಇವಿ ಸ್ಕೂಟರ್ ಬಿಡುಗಡೆ

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್
ಹೊಸ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 2.9kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 115 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಜೊತೆಗೆ ಪ್ರತಿ ಗಂಟೆಗೆ ಹೊಸ ಸ್ಕೂಟರ್ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಕೇವಲ 3.9 ಸೆಕೆಂಡುಗಳಲ್ಲಿ 40 ಕಿ.ಮೀ ವೇಗಪಡೆದುಕೊಳ್ಳುವ ಮೂಲಕ ನಗರದಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು
450ಎಸ್ ಇವಿ ಸ್ಕೂಟರ್ ಮೇಲ್ನೋಟಕ್ಕೆ 450ಎಕ್ಸ್ ಮಾದರಿಯಂತೆ ಕಂಡರೂ ಹಲವಾರು ವಿಭಿನ್ನತೆಗಳು ಗ್ರಾಹಕರನ್ನು ಸೆಳೆಯಲಿದ್ದು, ಪ್ರಮುಖ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೂಟರಿನಲ್ಲಿವೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಬ್ಲೂಟೂತ್ ಕನೆಕ್ಟಿವಿಟಿ, ಮಲ್ಟಿಪಲ್ ರೈಡ್ ಮೋಡ್‌ಗಳು, ಪಾರ್ಕ್ ಅಸಿಸ್ಟ್, ಆಟೋ ಹೋಲ್ಡ್, ಫಾಲ್ ಸೇಫ್, ಕೋಸ್ಟಿಂಗ್ ರೆಜೆನ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಸೇರಿ ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಅತ್ಯುತ್ತಮ ಹೈಬ್ರಿಡ್ ಕಾರುಗಳಿವು!

ಮತ್ತೊಂದು ವಿಶೇಷವೆಂದರೆ ಹೊಸ ಇವಿ ಸ್ಕೂಟರ್ ನಲ್ಲಿ ಡೀಪ್ ವ್ಯೂ ಡಿಸ್ಪ್ಲೇ ನೀಡಲಾಗಿದ್ದು, ಹೊಸ ಡಿಸ್ಪ್ಲೇ ಸೌಲಭ್ಯವು ಈ ವಿಭಾಗದಲ್ಲಿನ ಇವಿ ಸ್ಕೂಟರ್ ಗಳಿಂತಲೂ ನಾಲ್ಕು ಪಟ್ಟು ಹೆಚ್ಚು ಪ್ರಕಾಶಮಾನ ಬೆಳಕು ಹೊಂದಿದೆ. ಇದು ರೈಡಿಂಗ್ ಸಂದರ್ಭದಲ್ಲಿ ಯಾವುದೇ ರೀತಿಯ ವಾತಾವರಣ ಸಂದರ್ಭದಲ್ಲೂ ಸಮರ್ಪಕ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎನ್ನಬಹುದು. ಈ ಮೂಲಕ ಎಥರ್ ಎನರ್ಜಿ ಕಂಪನಿಯು ಬಜೆಟ್ ಬೆಲೆಯಲ್ಲೂ ಗುಣಮಟ್ಟದ ಹೊಸ ಇವಿ ಉತ್ಪನ್ನ ಬಿಡುಗಡೆ ಮಾಡುವ ಪ್ರಯತ್ನಿಸಿದ್ದು, ಇದು ಓಲಾ ಎಸ್1 ಏರ್ ಮಾದರಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Published On - 8:11 pm, Fri, 11 August 23