ಉತ್ತರ ಕನ್ನಡ ಜಿಲ್ಲೆಯಲ್ಲಿ ಪಶು ವೈದ್ಯರಿಲ್ಲದೆ ಅನಾರೋಗ್ಯ ಪೀಡಿತ ಜಾನುವಾರಗಳು ನಿತ್ಯ ನರಳುತ್ತಿವೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಗೆ ಕೇವಲ 18 ಜನ ಮಾತ್ರ ಪಶು ವೈದ್ಯರಿದ್ದಾರೆ. ಹೀಗಾಗಿ ಒಂದು ಕಡೆ ವೈದ್ಯರ ಕೊರತೆ, ಮತ್ತೊಂದು ಕಡೆ ಜಾನುವಾರಗಳಿಗೆ ಮಳೆಗಾಲದಲ್ಲಿ ಹೆಚ್ಚಾಗುತ್ತಿರುವ ರೋಗದ ಭಾದೆ. ಇದರಿಂದ ಜಾನುವಾರಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುವುದು ಕಷ್ಟ ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಪಶು ಆಸ್ಪತ್ರೆ ಉಪನಿರ್ದೇಕ ರಾಕೇಶ ಬಂಗ್ಲೆ ಹೇಳಿದರು.