Haveri News; ಬಿಸಿಯೂಟ ಸ್ಥಗಿತ ಕುರಿತು ಹಾವೇರಿ ಜಿಲ್ಲಾ ಪಂಚಾಯತ್ ಸಿಇಓ ಪ್ರತಿಕ್ರಿಯಿಸಿದ್ದು, ಜಿಲ್ಲೆಗೆ ಸರ್ಕಾರದಿಂದ ಬರಬೇಕಾಗಿದ್ದ ರೇಷನ್ ಬಂದಿದೆ. ಆದರೆ ತಾಲೂಕು ಮಟ್ಟದಿಂದ ಪೂರೈಕೆಯಾಗಬೇಕಿರುವ ವ್ಯತ್ಯಯವಾಗಿದೆ. ಈ ವಿಳಂಬಕ್ಕೆ ಕೆಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಅನ್ನದಾತರು ಸಾಲದ ನೋಟಿಸ್ ನೋಡಿ ಕಂಗಾಲಾಗಿದ್ದಾರೆ. ಇನ್ನಾದರು ಜಿಲ್ಲಾಡಳಿತ ಆಯಾ ರೈತರ ಪರವಾಗಿ ಬ್ಯಾಂಕ್ ಗಳಿಗೆ ನೋಟಿಸ್ ನೀಡಿ, ರೈತರಿಗೆ ಸಾಲಮಾನ್ನಾ ಅಥವಾ ಕಾಲಾವಧಿಯನ್ನ ಹೆಚ್ಚು ಮಾಡಬೇಕು ಎಂದು ಅನ್ನದಾತರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಹಾವೇರಿ ತಾಲೂಕಿನ ಶಾಕಾರ ಮತ್ತು ಹಾವನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತುಂಗಾಭದ್ರ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಜನರ ಕಷ್ಟಗಳನ್ನು ವಿವರಿಸಲಾಗಿದೆ.
ಹಾವೇರಿಯ ಸಿಂದಗಿ ಮಠದಲ್ಲಿ ಮಾಜಿ ಸಚಿವ ಈಶ್ವರಪ್ಪ ಶತರುದ್ರಾಭಿಷೇಕ, ರುದ್ರಹೋಮ. ಪುತ್ರ ಕಾಂತೇಶ್ಗೆ MP ಟಿಕೆಟ್ ನೀಡುವ ವಿಚಾರ. ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂದು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ,ರಾಷ್ಟ್ರ ಸಮಿತಿಯರು ತಿರ್ಮಾನ ಮಾಡ್ತಾರೆ ಎಂದ ಈಶ್ವರಪ್ಪ.
ಕೊರೋನಾ ಸಾವು ಸಂಖ್ಯೆಯಲ್ಲಿ ಮಾತ್ರವಲ್ಲದೆ ಹಲವು ಅಪಖ್ಯಾತಿ ಗಳಿಸುವುದರಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿದೆ. ಲಂಪಿ ಸ್ಕಿನ್ ಕಾಯಿಲೆ ನಂತರ ಇದೀಗ ಮದ್ರಾಸ್ ಐ ಎಂಬ ಕಣ್ಣಿನ ರೋಗ ಜಿಲ್ಲೆಯನ್ನು ಕಾಡುತ್ತಿದೆ.
ಹಾವೇರಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಎಸ್ಬಿಐ ನಿವೃತ್ತ ಮ್ಯಾನೇಜರ್ಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೂಡಲೇ ಗಾಯಾಳುವನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Haveri News: ಲೋ ಬಿಪಿಯಾಗಿ ಕುಸಿದುಬಿದ್ದು ಕರ್ತವ್ಯನಿರತ ಹೆಡ್ಕಾನ್ಸ್ಟೇಬಲ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದಿದೆ.
Visual impairment: ಹಾವೇರಿ ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಹೆಚ್ಚಾಗುತ್ತಿದೆ. ಕಾರಣ ಏನೆಂಬುದು ತಿಳಿದುಬಂದಿಲ್ಲ. ಮಹಾಮಾರಿ ಕೊರೊನಾ ಕಾಲದಲ್ಲಿ ಅಂಟಿಕೊಂಡ ಮೊಬೈಲ್ ಗೀಳು ಇದಕ್ಕೆ ಕಾರಣೀಭೂತವಾಗಿರಬಹುದಾ?
Lumpy Skin Disease: ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಕಾಡ್ತಿದೆ. ಜಿಲ್ಲೆಯಲ್ಲಿ 104 ಜನ ಪಶು ವೈದ್ಯರು, 230 ಜನ ಪಶು ವೈದ್ಯ ಪರೀಕ್ಷಕರು ಇರಬೇಕಿತ್ತು. ಆದ್ರೆ ಅದರಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ.
ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸಲು ಅಂದಿನ ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಇಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಪ್ರಮೋದ್ ಮುತಾಲಿಕ್, ಬಿಜೆಪಿ ಮುಸ್ಲಿಮರ ಜೊತೆ ಕೈಜೋಡಿಸಿತ್ತು ಎಂದು ಆರೋಪಿಸಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆ ಬೆನ್ನಲ್ಲೇ ಇದೀಗ ಹಾವೇರಿ ತಹಶೀಲ್ದಾರ್ ಕಚೇರಿ ಸೋರುತ್ತಿದ್ದು, ಸಿಬ್ಬಂದಿಗಳು ಕಾಗದ ಪತ್ರಗಳನ್ನು ರಕ್ಷಿಸಲು ಪರದಾಟ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜುಲೈ 25) ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದರು. ಈ ವೇಳೆ ಎಲ್ಲಾ ವಿಚಾರಗಳಲ್ಲೂ ಜಿಲ್ಲೆ ಹಿಂದುಳಿದಿರುವುದರ ಬಗ್ಗೆ ಜಿಲ್ಲಾಧಿಕಾರಿಯವರನ್ನು ಏಕವಚನದಲ್ಲೇ ಸಿಎಂ ಪ್ರಶ್ನಿಸಿದರು.