ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.
Brain Activity: ಎಲ್ಲರೂ ಹಬ್ಬದ ಮೂಡ್ನಲ್ಲಿದ್ದೀರಿ, ಆಫೀಸಿನಲ್ಲಿ ಕೆಲಸದ ಒತ್ತಡ ಬೇರೆ. ಆದರೂ ವಾರಾಂತ್ಯವೂ ಬರುತ್ತಿದೆ ಎಂಬ ಸಮಾಧಾನವೂ ಇದೆ. ಎಲ್ಲದರ ಮಧ್ಯೆ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಟ್ಟರೆ ಹೇಗೆ? ಈ ಮರದ ತುಂಡುಗಳ ಮಧ್ಯೆ ಒಂದು ಪುಟಾಣಿ ಬೆಕ್ಕು ಅಡಿಗಿದೆ. ಅದನ್ನು ಕಂಡುಹಿಡಿಯುವಿರಾ? ನಿಮಗಿರುವ ಸಮಯ 8 ಸೆಕೆಂಡುಗಳು.
Ecofriendly : ಈ ಕೊಳವೆಗಳಿಗೆ ಮಣಿಗಂಡನ್ ಕೋಕೋ ಲೀಫಿ ಸ್ಟ್ರಾಸ್ ಎಂದು ನಾಮಕರಣ ಮಾಡಿದ್ದಾರೆ. ಬಿಸಿ ಪಾನೀಯಗಳಲ್ಲಿ ಅರ್ಧ ಗಂಟೆ, ತಂಪು ಪಾನೀಯಗಳಲ್ಲಿ 6 ಗಂಟೆಯತನಕ ಇವು ಹಾಗೇ ಇರುತ್ತವೆ. ಸದ್ಯ ದಿನಕ್ಕೆ 10,000ದಂತೆ 12ಇಂಚುಗಳ ಸ್ಟ್ರಾ ತಯಾರಿಸಲಾಗುತ್ತಿದೆ. ಇವುಗಳ ಬೆಲೆ ಒಂದಕ್ಕೆ ರೂ. 1.5ರಿಂದ ರೂ. 3. ಗ್ರಾಮೀಣ ಮಹಿಳೆಯರು ಇವುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.
New Born : ಬಿಡೆನು ಈ ಟ್ರೇ ಮಾತ್ರ ಬಿಡೆನು! ಎಂದು ಗಟ್ಟಿಯಾಗಿ ಹಿಡಿದುಕೊಂಡಿದೆ ಈ ಮಗು. ಇದು ಎಲ್ಲಿ ಜನಿಸಿದೆ ಎಂಬಿತ್ಯಾದಿ ವಿವರಗಳು ತಿಳಿದು ಬಂದಿಲ್ಲ. ಆದರೆ ಹುಟ್ಟುತ್ತಲೇ ಮಹಾನ್ ಶಕ್ತಿಪ್ರದರ್ಶನಕ್ಕಿಳಿದ ಈ ಮಗುವಿನ ವಿಡಿಯೋ ಅನ್ನು ನೆಟ್ಟಿಗರು ಕುತೂಹಲ, ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಬಲಶಾಲಿಯನ್ನು ಭುವಿಗೆ ಕರೆತಂದ ವೈದ್ಯತಂಡ ಅಪರೂಪದ ದೃಶ್ಯ ಕಂಡು ಸಂಭ್ರಮಿಸುತ್ತಿದೆ.
Jailer : ತಿಂಗಳಿಂದ ಈ ಕಾವಾಲಾ ರೀಲ್ ನೋಡುತ್ತಿದ್ದೇವೆ, ಕೊರಿಯಾ, ಜಪಾನ್ ಮುಂತಾದ ದೇಶಗಳಿಂದ ಯಾರೆಲ್ಲಾ ಈ ಹಾಡಿಗೆ ನರ್ತಿಸುತ್ತಿದ್ದಾರೆ. ಆದರೆ ಈಗ ಈ ಉಗಾಂಡಾದ ಮಕ್ಕಳು ಈ ಹಾಡಿಗೆ ನರ್ತಿಸಿದಷ್ಟು ಸೊಗಸು ಅವರಿಂದ ಹೊಮ್ಮಿಲ್ಲ. ನಿಜಕ್ಕೂ ಈ ಮಕ್ಕಳ ಉತ್ಸಾಹ ಮತ್ತು ಆಸ್ಥೆ ಕಂಡು ಬಹಳ ಖುಷಿಯಾಯಿತು. ಈ ಹಾಡನ್ನು ಹಾಡಿದ ಶಿಲ್ಪಾ ರಾವ್ ನಿಮಗೆ ಅಭಿನಂದನೆ ಎನ್ನುತ್ತಿದ್ದಾರೆ ನೆಟ್ಟಿಗರು.
Washroom : ಈ ವ್ಲಾಗರ್ ಇದೊಂದು ಸ್ನಾನಗೃಹ ಎಂದು ಹೇಳದಿದ್ದರೆ, ಎಲ್ಲರೂ ಇದು ಅರಮನೆಯೆಂದೇ ಭಾವಿಸುತ್ತಿದ್ದರು. ಅರಮನೆಯಂಥ ಭವ್ಯ ಕಟ್ಟಡ, ವಿನ್ಯಾಸವನ್ನು ಇದು ಹೊಂದಿದೆ. ಎದುರಿಗಿರುವ ಉದ್ಯಾನವು ಅದರ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ನೆಟ್ಟಿಗರು ಬೆರಗಿನಿಂದ ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ. ನೋಡಿ ನೀವೂ ಈ ವಿಡಿಯೋ.
Rescue : ನಾಯಿಯನ್ನು ಪ್ರಾಣಿಯಂತೆ ನೋಡದೆ ಮನೆಯ ಸದಸ್ಯರಂತೆ ನೋಡಿದಾಗ ಮಾತ್ರ ಇಂಥ ಧೈರ್ಯ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳುವ ಮನಸ್ಸಾಗುತ್ತದೆ. ಈ ವಿಡಿಯೋದಲ್ಲಿ ಅಗ್ನಿಶಾಮಕದಳದವರು ನಿಂತಿರುವ ರೀತಿ ನೋಡಿದರೆ ಯಾಕೋ ವಿಚಿತ್ರವೆನ್ನಿಸುತ್ತದೆ. ಆದರೆ ತನ್ನ ನಾಯಿಯನ್ನು ಈತ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನುಗ್ಗಿ ರಕ್ಷಿಸಿದ ರೀತಿ ಮಾತ್ರ ಭಲೇ!
Two Headed Snake : ಲಂಡನ್ನಲ್ಲಿ ಅಪರೂಪದ ಎರಡು ತಲೆಯ ಹಾವು ಜನಿಸಿದೆ. ಇದನ್ನು ವೆಸ್ಟರನ್ ಹಾಗ್ನೋಸ್ ಎಂಬ ಜಾತಿಗೆ ಸೇರಿದ ಹಾವು ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುದ್ದಾದ ಈ ಹಾವನ್ನು ಸಾಕಬೇಕೂ ಎನ್ನಿಸುತ್ತದೆ ಜೊತೆಗೆ ಭಯವೂ ಆಗುತ್ತದೆ ಎಂದಿದ್ದಾರೆ. ನೀವೇನಂತೀರಿ?
Support : 'ಅಪ್ಪಟ ಸೊಸೆ'ಯನ್ನು ಅತ್ತೆಮಾವಂದಿರು ನಿರೀಕ್ಷಿಸಿದರು. ವೈದ್ಯಕೀಯ ಓದಿದ ಸೊಸೆ ಮಗುವನ್ನು ಕರೆದುಕೊಂಡು ತವರಿಗೆ ಮರಳಿ ಸ್ವಂತ ಕ್ಲಿನಿಕ್ ತೆರೆದಳು. ಆದರೆ ಹೆಂಡತಿಯ ಕನಸು ಮತ್ತು ತಮ್ಮಿಬ್ಬರ ಭವಿಷ್ಯವನ್ನು ಅರ್ಥ ಮಾಡಿಕೊಂಡ ಗಂಡ, ಅಪ್ಪ ಅಮ್ಮನ ಮಾತನ್ನು ಕಡೆಗಣಿಸಿ ವಾಪಾಸು ಹೆಂಡತಿಯೆಡೆ ಮನಸ್ಸು ಮಾಡಿದ. ಮುಂದೇನಾಯಿತು?
Brain Activity : ಚಿಕ್ಕಂದಿನಲ್ಲಿ ರಗಳೆ ಮಾಡಿದಾಗೆಲ್ಲ ನಿಮ್ಮ ಪೋಷಕರು ಅಥವಾ ಶಿಕ್ಷಕರು ಬೆಂಕಿಕಡ್ಡಿಗಳಿಂದ ಇಂಥ ಟೀಸರ್ಗಳನ್ನು ಮಾಡಿಸುತ್ತಿದ್ದುದು ನೆನಪಿದೆಯೇ? ಈಗಲೂ ಇಂಥದೇ ಚಟುವಟಿಕೆ ನಿಮ್ಮನ್ನಿಲ್ಲಿ ಕಾಯುತ್ತಿದೆ. ನೆಟ್ಟಿಗರು ವಿವಿಧ ಬಗೆಯಲ್ಲಿ ಈ ಸಮೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಿಮ್ಮ ಆಲೋಚನೆ, ಕೌಶಲ ಯಾವೆಲ್ಲ ದಿಕ್ಕಿನತ್ತ ಹರಿಯುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮದು.
Harassing Employee : ಶೌಚಾಲಯ ಮತ್ತು ಊಟದ ವಿರಾಮಗಳಿಗೂ ಸೈನೌಟ್ ಮಾಡಬೇಕೆಂದು ಹೊಸ ಮೇಲಧಿಕಾರಿಯು ಹೇಳುತ್ತಿದ್ದಾರೆ. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ನೀಡುತ್ತಿದ್ದಾರೆ, ಕೆಲಸವನ್ನು ತೊರೆಯಲೇ? ಆದರೆ ನನಗೆ ಮನಸ್ಸಿಲ್ಲ ಎನ್ನುತ್ತಿದ್ದಾರೆ ರೆಡ್ಡಿಟ್ ಖಾತೆದಾರರೊಬ್ಬರು. ಈ ವಿಷಯವಾಗಿ ನೆಟ್ಟಿಗರು ಮೇಲಧಿಕಾರಿಯ ನಡೆಗೆ ಕಾರಣವನ್ನೂ ವಿವರಿಸಿದ್ದಾರೆ ಮತ್ತು ಸಲಹೆಗಳನ್ನೂ ನೀಡಿದ್ದಾರೆ.
Khaki Studio: ನಮ್ಮ ಪೊಲೀಸ್ ಪಡೆ ಮಹತ್ವದ ಯಾವ ಕಾರ್ಯವೂ ಯಶಸ್ವಿಯಾಗಲೆಂದು ಹಾರೈಸುತ್ತಲೇ ಬಂದಿದೆ. ಇದೀಗ ಮುಂಬೈನ 'ಖಾಕಿ ಸ್ಟುಡಿಯೋ' ಚಂದ್ರಯಾನ 3 ಯಶಸ್ವಿಯಾಗಲಿ ಎಂದು ವಾದ್ಯಗೋಷ್ಠಿಯ ಮೂಲಕ ಹಾರೈಸಿತ್ತು. ಈ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟ್ಟಿಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ಕೇಳಿ ಒಮ್ಮೆ 'ಹಮ್ ಹೋಂಗೇ ಕಾಮ್ಯಾಬ್...'
Bengaluru : ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ಈತನನ್ನು ನೋಡಿದೆ, ಮಾತನಾಡಿಸಿದೆ, ಈತ ಬಹಳ ಸ್ಮಾರ್ಟ್ ಆಗಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈತ ಯಾರು? ಏನು ಎನ್ನುವ ಬಗ್ಗೆ ಸುಳಿವಿಲ್ಲ. ಈ ಪೋಸ್ಟ್ನ ಸತ್ಯಾಸತ್ಯತೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿದ ನೀವು ಏನು ಅಭಿಪ್ರಾಯ ನೀಡುತ್ತೀರಿ ಎಂಬ ಕುತೂಹಲ ನಮಗಿದೆ.