ಬೆಂಗಳೂರಿನಲ್ಲಿ ಮೋಸ್ಟ್ ವಾಟೆಂಡ್ ಇಂಟರ್ ನ್ಯಾಷನಲ್ ಕ್ರಿಮಿನಲ್ಸ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳಿಗೆ ಹಣಕಾಸು ನೀಡುತ್ತಿದ್ದವರು ಯಾರು? ಇವರು ಬೆಂಗಳೂರಿನಲ್ಲಿ ನೆಲಸಿದ್ದು ಏಕೆ ಎಂಬ ಅಂಶ ಬಹಿರಂಗವಾಗಿದೆ.
ಡೈರಿ ಸರ್ಕಲ್ ಬಳಿಯ ಮಹಾಲಿಂಗೇಶ್ ಬಡಾವಣೆಯ ಪೋಲಮಸ್ ಹೋಟೆಲ್ನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಬ್ಲಾಸ್ಟ್ ಆಗಿದ್ದು ಬ್ಲಾಸ್ಟ್ ತೀವ್ರತೆಗೆ ಹೋಟೆಲ್ ರೋಲಿಂಗ್ ಶೆಟರ್ ಮುಂದೆ ಮಲಗಿದ್ದ ವೃದ್ಧ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿ ಹೋಟೆಲ್ನಲ್ಲಿ ಬೆಂಕಿ ನಂದಿಸಿದ್ದಾರೆ.
ಒಂದೂವರೆ ವರ್ಷದಿಂದ ಎಸ್ಕೇಪ್ ಆಗಿದ್ದವನು, ಇತ್ತೀಚೆಗೆ ದಿಢೀರನೆ ಬಂದು ಮತ್ತೆ ಕಿಡ್ನಾಪ್ ದಂಧೆಗೆ ಇಳಿದುಬಿಟ್ಟಿದ್ದ. ಕಳೆದ ತಿಂಗಳು ಹರಿ ಪ್ರಸಾದ್ ಎಂಬಾತನ ಕಿಡ್ನಾಪ್ ಮಾಡಿ ಹಣ, ಚಿನ್ನ ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರಿಗೆ ಸಿಕ್ಕರೇ ಜೈಲು ಫಿಕ್ಸ್ ಅಂತ ಸಿಕ್ಕ ಸಿಕ್ಕ ಕಡೆ ಫುಲ್ ಟ್ರಿಪ್ ಹೊಡೆಯುತ್ತಿದ್ದ.
ಬೇರೆ-ಬೇರೆ ದೇಶ, ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚತ್ತಲೇ ಇದೆ. ಇದರಿಂದ ಒಂದು ರೀತಿ ಬೆಂಗಳೂರು ಕ್ರಿಮಿನಲ್ಗಳ ಅಡ್ಡೆಯಾಗ್ಬಿಟ್ಟಿದೆ. ಅದರಂತೆ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳು ಸಿಕ್ಕಿಬಿದ್ದಿದ್ದಾರೆ.
fake Bengaluru police account on X; ಏಪ್ರಿಲ್ 28ರಂದು ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಜತೆಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಲಭ್ಯವಿರುವ ತಂತ್ರಜ್ಞಾನಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮಾಗೇಶ್ ಕುಮಾರ್ನನ್ನು ಚೆಟ್ಟುಪಟ್ಟುವಿನಲ್ಲಿ ಬಂಧಿಸಿದ್ದಾರೆ.
ನಟೋರಿಯಸ್ ರೌಡಿಶೀಟರ್ಸ್ಗಳಾದ ಬೇಕರಿ ರಘು ಮತ್ತು ಸೈಕಲ್ ರವಿ ಮತ್ತೆ ಬಾಲ ಬಿಚ್ಚಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಲು ಯತ್ನಿಸಿದ ಅರೋಪದಡಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಮಾನದಲ್ಲಿ ಗಗನ ಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವಿದೇಶಿ ಪ್ರಜೆಯನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಅಕ್ರಂ ಅಹಮದ್ ಬಂಧಿತ ಅರೋಪಿ.
ರಿಸರ್ವ್ ಬಸ್ ಗಳನ್ನೇ ಟಾರ್ಗೆಟ್ ಮಾಡಿ ಪ್ರಯಾಣಿಕರ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರು ಖದೀಮರನ್ನು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 39 ಲ್ಯಾಪ್ಟಾಪ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಂಡ ಬಾತ್ ರೂಮಿಗೆ ಹೋಗಿದ್ದಾಗ ಇತ್ತ ನವ ವಿವಾಹಿತೆ ಮಹಿಳೆ ಪ್ರಿಯತಮನ ಜೊತೆ ಬೈಕ್ನಲ್ಲಿ ಪರಾರಿಯಾಗಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರಮೇಶ್, ಪತ್ನಿಯನ್ನು ಹುಡಿಕೊಡಿ ಎಂದು ಪೊಲೀಸ್ ಮೆಟ್ಟಿಲೇರಿದ್ದಾರೆ.
ಸರಗಳ್ಳತನ ಯಶಸ್ವಿಯಾದರೆ ಮಲೆ ಮಹದೇಶ್ವರನಿಗೆ ಮುಡಿ ಕೊಡುವುದಾಗಿ ಕಳ್ಳರು ಹರಕೆ ಹೊತ್ತಿದ್ದರಂತೆ. ಅದರಂತೆ ಸರ ಕಳ್ಳತನ ಮಾಡಿದ ಕಳ್ಳರು ಬೆಟ್ಟಕ್ಕೆ ಹೋಗಿ ಹರಕೆ ಸಂದಾಯ ಮಾಡಿ ಹೊರಬರುತ್ತಿದ್ದಂತೆ ಆರೋಪಿಗಳನ್ನು ಬೆಂಗಳೂರಿನ ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯುವಕನೊಬ್ಬನಿಗೆ ಲಾಂಗ್ನಲ್ಲಿ ಹಲ್ಲೆ ನಡೆಸುವ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಹವಾ ಸೃಷ್ಟಿಸಲು ಮುಂದಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ಅಣ್ಣನನ್ನ ಬಾಸ್ ಅನ್ನಬೇಕು ಎಂದು ಅಮಾಯ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದನು.
ಕುಮಾರಸ್ವಾಮಿ ಲೇಔಟ್ನಿಂದ ಕತ್ರಿಗುಪ್ಪೆಗೆ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಬಲಿಯಾಗಿರುವಂತಹ ಘಟನೆ ಬೆಂಗಳೂರಿನ ಪುನೀತ್ ರಾಜ್ಕುಮಾರ್ ರಸ್ತೆಯ ಅಶ್ವಿನಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಯೇ ದರಂತಕ್ಕೆ ಕಾರಣ ಎನ್ನಲಾಗುತ್ತಿದೆ.